ಬೆಂಗಳೂರು[ಜೂ.24]: ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಾಯಗತಾಯ ಕಪ್ ಗೆಲ್ಲುವ ಸಂಕಲ್ಪದೊಂದಿಗೆ ಕಣಕ್ಕಿಳಿದಿರುವ ಪಿ.ಆರ್ ಶ್ರೀಜೇಶ್ ನೇತೃತ್ವದ ಭಾರತ ಹಾಕಿ ತಂಡ ಇಂದು ವಿಶ್ವದ 2ನೇ ಶ್ರೇಯಾಂಕಿತ ಬಲಿಷ್ಠ ಅರ್ಜೆಂಟೀನಾ ತಂಡವನ್ನು 2-1 ಗೋಲುಗಳಿಂದ ಮಣಿಸಿ ಜಯದ ನಗೆ ಬೀರಿದೆ.

ಉದ್ಘಾಟನಾ ಪಂದ್ಯದಲ್ಲಿ 4-0 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿದ್ದ ಹಾಕಿ ಟೀಂ ಇಂಡಿಯಾ ಇಂದೂ ಕೂಡಾ ಅದೇ ಲಯವನ್ನು ಮುಂದುವರೆಸಿದೆ. ಹರ್ಮನ್’ಪ್ರೀತ್ ಸಿಂಗ್ ಹಾಗೂ ಮನ್ದೀಪ್ ಸಿಂಗ್ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಭಾರತ ತಂಡವು ಅರ್ಜೆಂಟೀನಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಟೀಂ ಇಂಡಿಯಾದ ಈ ಗೆಲುವನ್ನು ಹಾಕಿ ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಜೇಶ್ ಪಡೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ...