ನವದೆಹಲಿ(ಮೇ.09): ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಅತಿಹೆಚ್ಚು ಚರ್ಚೆಗೆ ಒಳಪಟ್ಟಆಟಗಾರರನ್ನು ಸೇರಿಸಿ, ಟ್ವೀಟರ್‌ ಇಂಡಿಯಾ 2019ರ ಐಪಿಎಲ್‌ ಕನಸಿನ ತಂಡವನ್ನು ಪ್ರಕಟಿಸಿದೆ. ಇದರಲ್ಲಿ 8 ಭಾರತೀಯ, 3 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ. ಹೆಚ್ಚು ಬ್ಯಾಟ್ಸ್‌ಮನ್‌ಗಳೇ ಇರುವ ತಂಡದಲ್ಲಿ ಇಬ್ಬರು ವೇಗದ ಬೌಲಿಂಗ್‌ ಆಲ್ರೌಂಡರ್‌ಗಳು, ಒಬ್ಬ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಹಾಗೂ ಒಬ್ಬ ತಜ್ಞ ವೇಗಿಗೆ ಸ್ಥಾನ ಸಿಕ್ಕಿದೆ.

ಟ್ವಿಟರ್‌ ತಂಡ: ಎಂ.ಎಸ್‌.ಧೋನಿ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಆ್ಯಂಡ್ರೆ ರಸೆಲ್‌, ಕ್ರಿಸ್‌ ಗೇಲ್‌, ಹಾರ್ದಿಕ್‌ ಪಾಂಡ್ಯ, ಹರ್ಭಜನ್‌ ಸಿಂಗ್‌, ರವೀಂದ್ರ ಜಡೇಜಾ, ಡೇವಿಡ್‌ ವಾರ್ನರ್‌, ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌.