ನಾಲ್ಕರ ಘಟ್ಟ ಪ್ರವೇಶಿಸಿದೆ ಮಿಥಾಲಿ ಪಡೆಗೆ ಕ್ರಿಕೆಟ್ ಜಗತ್ತು ಶುಭಕೋರಿದ್ದು ಹೀಗೆ...
ಬೆಂಗಳೂರು(ಜು.15): ಮಿಥಾಲಿ ರಾಜ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ಭರ್ಜರಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ನ್ಯೂಜಿಲ್ಯಾಂಡ್ ತಂಡವನ್ನು 186ರನ್'ಗಳ ಅಂತರದಿಂದ ಬಗ್ಗುಬಡಿದ ವನಿತೆಯರ ತಂಡ ಸುಲಭವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ.
ನಾಯಕಿ ಮಿಥಾಲಿ ರಾಜ್ ಅಮೋಘ ಶತಕ, ಕನ್ನಡತಿ ವೇದಾ ಕೃಷ್ಣಮೂರ್ತಿ ಅಬ್ಬರದ ಬ್ಯಾಟಿಂಗ್ ಹಾಗೂ ಮತ್ತೊರ್ವ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಕರಾರುವಕ್ಕಾದ ದಾಳಿಗೆ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅಭಿನಂದನೆ ಸಲ್ಲಿಸಿದ್ದಾರೆ.
ನಾಲ್ಕರ ಘಟ್ಟ ಪ್ರವೇಶಿಸಿದೆ ಮಿಥಾಲಿ ಪಡೆಗೆ ಕ್ರಿಕೆಟ್ ಜಗತ್ತು ಶುಭಕೋರಿದ್ದು ಹೀಗೆ...
