ವಿಜಯ್ ಹಜಾರೆ ಟೂರ್ನಿಯಲ್ಲಿ ಅತೀ ವೇಗದ ಶತಕ ಸಿಡಿಸಿದ ಪೃಥ್ವಿ ಶಾ ದಾಖಲೆ ಬರೆದಿದ್ದಾರೆ. ಪೃಥ್ವಿ ಶಾ ಸಾಧನೆಗೆ ಟ್ವಿಟರಿಗರು ಹೇಳಿದ್ದೇನು? ಇಲ್ಲಿದೆ.

ಬೆಂಗಳೂರು(ಸೆ.23): ವಿಜಯ್ ಹಜಾರೆ ಟೂರ್ನಿಯಲ್ಲಿ ಮುಂಬೈ ಬ್ಯಾಟ್ಸ್‌ಮನ್ ಪೃಥ್ವಿ ಶಾ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧ ನಡೆದ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 61 ಎಸೆತದಲ್ಲಿ ಸೆಂಚುರಿ ಬಾರಿಸಿದ್ದಾರೆ.

ರೈಲ್ವೇಸ್ ವಿರುದ್ದ ಬ್ಯಾಟಿಂಗ್ ಇಳಿದ ಮುಂಬೈ ಆರಂಭದಲ್ಲೇ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ಆದರೆ ತಂಡಕ್ಕೆ ಆಸರೆಯಾದ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 61 ಎಸೆತದಲ್ಲಿ ಶತಕ ಪೂರೈಸಿದರೆ, 81 ಎಸೆತದಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸೋ ಮೂಲಕ 129 ರನ್ ಕಾಣಿಕೆ ನೀಡಿದರು. 

ಶ್ರೇಯಸ್ ಅಯ್ಯರ್ 118 ಎಸೆತದಲ್ಲಿ 144 ರನ್ ಚಚ್ಚಿದರು. ಈ ಮೂಲಕ ಮುಂಬೈ 5 ವಿಕೆಟ್ ನಷ್ಟಕ್ಕೆ 400 ರನ್ ಸಿಡಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ರೈಲ್ವೇಸ್ 227 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ 173 ರನ್ ಗೆಲುವು ಸಾಧಿಸಿತು.

ವಿಜಯ್ ಹಜಾರೆ ಟೂರ್ನಿಯಲ್ಲಿ ಅತೀ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಪೃಥ್ವಿ ಶಾ ಸಾಧನೆಗೆ ಟ್ವಿಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…

Scroll to load tweet…