ಒಂದು ಭಾಗದಲ್ಲಿ ಬೂಮ್ರಾ ನೋಬಾಲ್‌ ಎಸೆಯುತ್ತಿರುವ ಚಿತ್ರ ಮತ್ತು ಇನ್ನೊಂದು ಕಡೆ ಟ್ರಾಫಿಕ್‌ ಸಿಗ್ನಲ್‌ ಗೆರೆಯ ಹಿಂದೆ ನಿಂತಿರುವ ವಾಹನಗಳ ಫೋಟೋವನ್ನು ಸಂಯೋಜಿಸಿದ ಚಿತ್ರವೊಂದನ್ನು ಜೈಪುರ ಹಾಗೂ ಪಾಕಿಸ್ತಾನದ ಫೈಸಲಾಬಾದ್‌ ಟ್ರಾಫಿಕ್‌ ಪೊಲೀಸರು ಬಳಸಿದ್ದಾರೆ.

ಇಸ್ಲಾಮಾಬಾದ್‌/ಜೈಪುರ(ಜೂ.24): ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ ಎಸೆದ ನೋಬಾಲ್‌, ತಂಡದ ಸೋಲಿಗೆ ಕಾರಣ​ವಾದ ಅಂಶಗಳ ಪೈಕಿ ಪ್ರಮುಖವಾಗಿತ್ತು. ಇದೀಗ ಇದೇ ನೋಬಾಲ್‌ ಅನ್ನು ಭಾರತ ಮತ್ತು ಪಾಕಿಸ್ತಾನ​ಗಳಲ್ಲಿ ಸಂಚಾರ ಪೊಲೀಸರು, ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳಲ್ಲಿ ಬಳಸಿಕೊಳ್ಳುತ್ತಿ​ದ್ದಾರೆ.

ಒಂದು ಭಾಗದಲ್ಲಿ ಬೂಮ್ರಾ ನೋಬಾಲ್‌ ಎಸೆಯುತ್ತಿರುವ ಚಿತ್ರ ಮತ್ತು ಇನ್ನೊಂದು ಕಡೆ ಟ್ರಾಫಿಕ್‌ ಸಿಗ್ನಲ್‌ ಗೆರೆಯ ಹಿಂದೆ ನಿಂತಿರುವ ವಾಹನಗಳ ಫೋಟೋವನ್ನು ಸಂಯೋಜಿಸಿದ ಚಿತ್ರವೊಂದನ್ನು ಜೈಪುರ ಹಾಗೂ ಪಾಕಿಸ್ತಾನದ ಫೈಸಲಾಬಾದ್‌ ಟ್ರಾಫಿಕ್‌ ಪೊಲೀಸರು ಬಳಸಿದ್ದಾರೆ.

ನಮ್ಮ ಹೋರಾಟಕ್ಕೆ ಸಿಗುವ ಗೌರವವಿದು:

ಜೈಪುರ ಸಂಚಾರ ಪೊಲೀಸರ ಸೃಜನಶೀಲತೆಗೆ ಬೂಮ್ರಾ ಬೇಸರ ವ್ಯಕ್ತಪಡಿಸಿದ್ದು ‘ದೇಶಕ್ಕಾಗಿ ಸದಾ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸಿದರೂ ಕೊನೆಗೆ ನಮಗೆ ಸಿಗುವ ಗೌರವ ಎಂತದ್ದು ಎಂದು ಗೊತ್ತಾಗಿದೆ. ಆದರೂ ಚಿಂತಿಸ ಬೇಡಿ, ನೀವು ಮಾಡುವ ತಪ್ಪುಗಳನ್ನು ನಾನು ಅಣಕಿಸುವುದಿಲ್ಲ. ಯಾಕೆಂದರೆ ಮನುಷ್ಯರಾದವರು ತಪ್ಪು ಮಾಡುತ್ತಾರೆ ಎಂದು ನಾನು ನಂಬಿದ್ದೇನೆ' ಎಂದು ಟ್ವಿಟರ್‌'ನಲ್ಲಿ ಬೂಮ್ರಾ ಬರೆದುಕೊಂಡಿದ್ದಾರೆ.