Asianet Suvarna News Asianet Suvarna News

5ನೇ ಆವೃತ್ತಿಯ ಪ್ರೊ ಕಬಡ್ಡಿ ಪ್ರಶಸ್ತಿ ಮೊತ್ತ ದುಪ್ಪಟ್ಟು..!

ಈ ಆವೃತ್ತಿಯ ಉದ್ಘಾಟನಾ ಪಂದ್ಯ 28 ರಂದು ಹೈದರಾಬಾದ್‌'ನಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳು ತಲೈವಾಸ್ ತಂಡಗಳು ಸೆಣಸಲಿವೆ.

Tournament prize money doubles to Rs eight crores
  • Facebook
  • Twitter
  • Whatsapp

ನವದೆಹಲಿ(ಜು.15): ಪ್ರೊ ಕಬಡ್ಡಿ ಆರಂಭವಾದಗಿನಿಂದಲೂ ಟೂರ್ನಿಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ ಬಂದಿದೆ

ಇದೇ ಜುಲೈ 28 ರಿಂದ ಆರಂಭವಾಗಲಿರುವ 5ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ಮೊತ್ತ 8 ಕೋಟಿಗೆ ಏರಿಸಲಾಗಿದೆ.  

ಇದು 2016 ರಲ್ಲಿ ನಡೆದಿದ್ದ 4ನೇ ಆವೃತ್ತಿಯ ಪ್ರಶಸ್ತಿ ಮೊತ್ತಕ್ಕಿಂತ 2 ಕೋಟಿ ಹೆಚ್ಚಾಗಿದೆ. ಮೊದಲ ಬಾರಿಗೆ 12 ತಂಡಗಳನ್ನು ಲೀಗ್‌'ನಲ್ಲಿ ಕಣಕ್ಕಿಳಿಯುತ್ತಿದ್ದು, 138 ಪಂದ್ಯಗಳು ನಡೆಯಲಿವೆ. ಹಾಗೆ ಚಾಂಪಿಯನ್ ಆಗುವ ತಂಡ 3 ಕೋಟಿ ಹಣವನ್ನು ಗಳಿಸಿದರೆ, ರನ್ನರ್ ಅಪ್ ತಂಡ 1.8 ಕೋಟಿ ಮತ್ತು ತೃತೀಯ ಸ್ಥಾನ ಪಡೆಯುವ ತಂಡ 1.2 ಕೋಟಿ ಹಣವನ್ನು ಪಡೆಯಲಿದೆ.

ಕಳೆದ 4 ಆವೃತ್ತಿಗಳಲ್ಲಿ 8 ತಂಡಗಳು ಮಾತ್ರ ಆಡಿದ್ದವು. ಈ ಲೀಗ್‌'ನಲ್ಲಿ 4ನೇ ಸ್ಥಾನ ಪಡೆಯುವ ತಂಡ 80 ಲಕ್ಷ, 5 ಹಾಗೂ 6ನೇ ಸ್ಥಾನ ಪಡೆಯುವ ತಂಡ ತಲಾ 35 ಲಕ್ಷ ರುಪಾಯಿಗಳನ್ನು ಪಡೆಯಲಿವೆ. ಇನ್ನು ಲೀಗ್‌'ನ ಅತ್ಯುತ್ತಮ ಆಟಗಾರ 15 ಲಕ್ಷ, ಉತ್ತಮ ರೈಡರ್ ಹಾಗೂ ಉತ್ತಮ ಡಿಫೆಂಡರ್ ತಲಾ 10 ಲಕ್ಷ, ಟೂರ್ನಿಯ ಯುವ ಆಟಗಾರ 8 ಲಕ್ಷ ಹಣವನ್ನು ಪಡೆಯಲಿದ್ದಾರೆ.

ಈ ಆವೃತ್ತಿಯ ಉದ್ಘಾಟನಾ ಪಂದ್ಯ 28 ರಂದು ಹೈದರಾಬಾದ್‌'ನಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ತಮಿಳು ತಲೈವಾಸ್ ತಂಡಗಳು ಸೆಣಸಲಿವೆ.

Follow Us:
Download App:
  • android
  • ios