Asianet Suvarna News Asianet Suvarna News

ಡಿಸೆಂಬರ್ 06ರಿಂದ ಬೆಂಗ್ಳೂರಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌

ಕೂಟದಲ್ಲಿ ಭಾರತ, ಬ್ರೆಜಿಲ್, ಇಟಲಿ, ಜಪಾನ್‌ ಹಾಗೂ ಟರ್ಕಿ ದೇಶಗಳ 6 ತಂಡಗಳು ಪಾಲ್ಗೊಳ್ಳಲಿವೆ. ಕೆಲ ದಿನಗಳಿಂದ ಅಹಮದಾಬಾದ್ ತಂಡದ ಆಟಗಾರರು ಬೆಂಗಳೂರಿನಲ್ಲೇ ಅಭ್ಯಾಸ ನಡೆಸುತ್ತಿದ್ದು, ಟ್ರೋಫಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Top stars set to play in volleyball Club World Championships in Bengaluru kvn
Author
First Published Dec 5, 2023, 10:41 AM IST

ಬೆಂಗಳೂರು(ಡಿ.05): ಚೊಚ್ಚಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದ್ದು, ಬೆಂಗಳೂರಿನಲ್ಲಿ ಬುಧವಾರದಿಂದ ಕೂಟ ಆರಂಭಗೊಳ್ಳಲಿದೆ. ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್) ಚಾಂಪಿಯನ್ ಅಹಮದಾಬಾದ್ ಡಿಫೆಂಡರ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಚೊಚ್ಚಲ ಪ್ರಶಸ್ತಿಯನ್ನು ತವರಿನಲ್ಲೇ ಗೆಲ್ಲಲು ಎದುರು ನೋಡುತ್ತಿದೆ.

ಕೂಟದಲ್ಲಿ ಭಾರತ, ಬ್ರೆಜಿಲ್, ಇಟಲಿ, ಜಪಾನ್‌ ಹಾಗೂ ಟರ್ಕಿ ದೇಶಗಳ 6 ತಂಡಗಳು ಪಾಲ್ಗೊಳ್ಳಲಿವೆ. ಕೆಲ ದಿನಗಳಿಂದ ಅಹಮದಾಬಾದ್ ತಂಡದ ಆಟಗಾರರು ಬೆಂಗಳೂರಿನಲ್ಲೇ ಅಭ್ಯಾಸ ನಡೆಸುತ್ತಿದ್ದು, ಟ್ರೋಫಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ತಂಡದ ಪ್ರಮುಖ ಆಟಗಾರ, ಮಂಗಳೂರಿನ ಅಶ್ವಲ್ ರೈ ಈ ಬಗ್ಗೆ ''ಕನ್ನಡಪ್ರಭ'' ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು. "ಕ್ಲಬ್ ವಾಲಿಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಪಿವಿಎಲ್ ಬಳಿಕ ದೇಶದ ವಾಲಿಬಾಲ್ ಪ್ರಗತಿಯ ಹಾದಿಯಲ್ಲಿದೆ. ಕ್ಲಬ್ ವಾಲಿಬಾಲ್ ಕೂಟಕ್ಕೂ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ‌. ಬೆಂಗಳೂರಲ್ಲೇ ಕೂಟ ನಡೆಯುತ್ತಿರುವ ಕಾರಣ ಚಾಂಪಿಯನ್‌ ಆಗುವ ನಿರೀಕ್ಷೆ ಇದೆ" ಎಂದರು.

Pro Kabaddi League: ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು!

ಇದೇ ವೇಳೆ ತಂಡದಲ್ಲಿ ಅಶ್ವಲ್ ಜೊತೆ ಕರ್ನಾಟಕದ ಶೃಜನ್ ಶೆಟ್ಟಿ, ಅಜ್ಮತ್ ಹಾಗೂ ಮನೋಜ್ ಕೂಡಾ ಇದ್ದಾರೆ. ಟೂರ್ನಿಯು ಡಿ.10ರ ವರೆಗೂ ನಡೆಯಲಿದ್ದು, ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅಹಮದಾಬಾದ್ ತಂಡ ಬುಧವಾರ ಆರಂಭಿಕ ಪಂದ್ಯದಲ್ಲಿ ಬ್ರೆಜಿಲ್‌ನ ಇಟಾಂಬೆ ಮಿನಾ ವಿರುದ್ಧ ಆಡಲಿದೆ.

2026ರ ಕಾಮನ್‌ವೆಲ್ತ್ ಗೇಮ್ಸ್‌ ಆಯೋಜನೆಯಿಂದ ಆಸ್ಟ್ರೇಲಿಯಾ ಹಿಂದಕ್ಕೆ ?

ಗೋಲ್ಡ್‌ಕೋಸ್ಟ್‌: ಮುಂಬರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯದಿಂದ ಆಸ್ಟ್ರೇಲಿಯಾ ಹಿಂದೆ ಸರಿಯುವ ಸಾಧ್ಯತೆ ದಟ್ಟವಾಗಿರುವುದರಿಂದ ಇತರ ದೇಶಗಳ ಬಿಡ್‌ಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಕಾಮನ್‌ವೆಲ್ತ್‌ ಗೇಮ್ಸ್‌ ಆಸ್ಟ್ರೇಲಿಯಾ ಮುಖ್ಯಸ್ಥ ಕ್ರೇಗ್‌ ಫಿಲಿಪ್‌, ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಶನ್‌ (ಸಿಜಿಎಫ್‌)ಗೆ ತಿಳಿಸಿದ್ದಾರೆ. 

IPL Auction: ಜೋಶ್ ಹೇಜಲ್‌ವುಡ್ ಮೇಲೆ ಹದ್ದಿಗಣ್ಣಿಟ್ಟಿವೆ ಈ ನಾಲ್ಕು IPL ಫ್ರಾಂಚೈಸಿಗಳು..!

ಕಳೆದ ಜುಲೈ ತಿಂಗಳಿನಲ್ಲಿ ವಿಕ್ಟೋರಿಯಾ ರಾಜ್ಯ ಆತಿಥ್ಯದಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಗೋಲ್ಡ್‌ ಕೋಸ್ಟ್‌ ಕೂಡಾ ಆಯೋಜನಾ ವೆಚ್ಚ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ತನ್ನಿಂದ ಕ್ರೀಡಾಕೂಟದ ಆಯೋಜನೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 2022ರ ಕ್ರೀಡಾಕೂಟವು ಆರ್ಥಿಕ ಸಂಕಷ್ಟದ ಕಾರಣದಿಂದಲೇ ದಕ್ಷಿಣ ಆಫ್ರಿಕಾದ ಡರ್ಬನ್‌ನಿಂದ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ಗೆ ಸ್ಥಳಾಂತರಗೊಂಡಿತ್ತು.

Follow Us:
Download App:
  • android
  • ios