ಈ ಹಿಂದೆ ಫ್ರೆಂಚ್ ಓಪನ್'ನಲ್ಲಿ ಮೊದಲ ಸುತ್ತಿನಲ್ಲೇ ನಾಲ್ಕು ಬಾರಿ ಮುಗ್ಗರಿಸಿದ್ದ ಕೆರ್ಬರ್, ಅಗ್ರಶ್ರೇಯಾಂಕಕ್ಕೇರಿದ ಮೇಲೆ ಇದೇ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದರು.

ಪ್ಯಾರಿಸ್(ಮೇ.28): ಜರ್ಮನಿಯ ಆ್ಯಂಜಲಿಕ್ ಕೆರ್ಬರ್ ಫ್ರೆಂಚ್ ಓಪನ್‌'ನ ಮೊದಲ ಸುತ್ತಿನಲ್ಲೇ ಹೀನಾಯ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರ ಜತೆಗೆ ಫ್ರೆಂಚ್ ಓಪನ್'ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡ ಮೊದಲ ಅಗ್ರ ಶ್ರೇಯಾಂಕಿತ ಆಟಗಾರ್ತಿ ಎನ್ನುವ ಅಪಖ್ಯಾತಿಗೂ ಕೆರ್ಬರ್ ಗುರಿಯಾಗಿದ್ದಾರೆ.

ವಿಶ್ವದ 40ನೇ ಶ್ರೇಯಾಂಕಿತ ಆಟಗಾರ್ತಿ ರಷ್ಯಾದ ಎಕ್ತರೀನಾ ಮಕರೋವಾ ವಿರುದ್ಧ 2-6, 2-6 ನೇರ ಸೆಟ್‌'ಗಳಲ್ಲಿ ವಿಶ್ವ ನಂಬರ್ ಒನ್ ಆಟಗಾರ್ತಿ ಕೆರ್ಬರ್ ಹೀನಾಯ ಸೋಲು ಅನುಭವಿಸಿದರು.

ಕಳೆದ ವರ್ಷ ಸೆರೆನಾ ವಿಲಿಯಮ್ಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದ ಆ್ಯಂಜಲಿಕ್ ಕೆರ್ಬರ್, ಆಸ್ಟ್ರೇಲಿಯನ್ ಓಪನ್ ಹಾಗೂ ಯುಎಸ್ ಓಪನ್ ಗೆದ್ದಿದ್ದರು.

ಈ ಹಿಂದೆ ಫ್ರೆಂಚ್ ಓಪನ್'ನಲ್ಲಿ ಮೊದಲ ಸುತ್ತಿನಲ್ಲೇ ನಾಲ್ಕು ಬಾರಿ ಮುಗ್ಗರಿಸಿದ್ದ ಕೆರ್ಬರ್, ಅಗ್ರಶ್ರೇಯಾಂಕಕ್ಕೇರಿದ ಮೇಲೆ ಇದೇ ಮೊದಲ ಬಾರಿಗೆ ಮೊದಲ ಸುತ್ತಿನಲ್ಲೇ ಸೋಲುಂಡು ನಿರಾಸೆ ಅನುಭವಿಸಿದರು.