ಕೆಪಿಎಲ್: ‘ಎ’ ಗುಂಪಿನ ಆಟಗಾರರ ಪಟ್ಟಿ ಪ್ರಕಟ

First Published 16, Jul 2018, 11:11 AM IST
Top billing for 35 players in KPL pool
Highlights

ಅಭಿಷೇಕ್ ರೆಡ್ಡಿ, ಸಿ.ಎಂ. ಗೌತಮ್, ಕೆ. ಗೌತಮ್, ಕರುಣ್, ಮಯಾಂಕ್, ಪಾಂಡೆ, ಮಿಥುನ್, ಸಮರ್ಥ್, ವಿನಯ್‌ಕುಮಾರ್, ಸ್ಟುವರ್ಟ್ ಬಿನ್ನಿ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ. ಜು.21ಕ್ಕೆ ಆಟಗಾರರ ಹರಾಜು ನಡೆಯಲಿದೆ.

ಬೆಂಗಳೂರು[ಜು.16]: ಆಗಸ್ಟ್ 15 ರಿಂದ ಆರಂಭವಾಗಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ 7 ತಂಡಗಳು ತಲಾ 4 ಆಟಗಾರರನ್ನು ರಿಟೈನ್ (ಉಳಿಕೆ ಆಟಗಾರರು) ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಎಸ್‌ಸಿಎ ಭಾನುವಾರ ‘ಎ’ ಗುಂಪಿನ 35 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿತು. 

ಪಟ್ಟಿಯಲ್ಲಿ ರಣಜಿ ಮತ್ತು ದೇಶಿಯ ಲೀಗ್‌ಗಳಲ್ಲಿ ರಾಜ್ಯ ತಂಡದ ಪರ ಮಿಂಚಿದ ಆಟಗಾರರು ಸ್ಥಾನ ಪಡೆದಿದ್ದಾರೆ.

ಅಭಿಷೇಕ್ ರೆಡ್ಡಿ, ಸಿ.ಎಂ. ಗೌತಮ್, ಕೆ. ಗೌತಮ್, ಕರುಣ್, ಮಯಾಂಕ್, ಪಾಂಡೆ, ಮಿಥುನ್, ಸಮರ್ಥ್, ವಿನಯ್‌ಕುಮಾರ್, ಸ್ಟುವರ್ಟ್ ಬಿನ್ನಿ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ. ಜು.21ಕ್ಕೆ
ಆಟಗಾರರ ಹರಾಜು ನಡೆಯಲಿದೆ.

loader