ಮೊಹಾಲಿ(ಅ.22): ನಾಳೆ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಏಕದಿನ ಪಂದ್ಯ ನಡೆಯಲಿದೆ.

ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರೋದ್ರಿಂದ ಸರಣಿ 1-1ರಿಂದ ಸಬಲಗೊಂಡಿದೆ. ಈಗ ಸರಣಿ ಮುನ್ನಡೆಗಾಗಿ ಮೊಹಾಲಿಯಲ್ಲಿ ಕಾದಾಡಲಿವೆ. 

ಮೊದಲ ಪಂದ್ಯವನ್ನ ಭರ್ಜರಿಯಾಗಿ ಗೆದ್ದಿದ್ದ ಟೀಮ್ ಇಂಡಿಯಾ, ಸೆಕೆಂಡ್ ಮ್ಯಾಚ್ ಅನ್ನ ವಿರೋಚಿತವಾಗಿ ಸೋತಿತ್ತು. 

ಈಗ ಮೊಹಾಲಿಯಲ್ಲಿ ಮತ್ತೆ ಜಯ ಕಾಣಲು ಎದುರು ನೋಡುತ್ತಿದೆ. ಮೊಹಾಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿಲ್ಲ. 

ಜ್ವರದಿಂದ ಬಳಲುತ್ತಿದ್ದ ಸುರೇಶ್ ರೈನಾ, ಗುಣಮುಖರಾಗಿದ್ದು, 3ನೇ ಪಂದ್ಯ ಆಡಿದ್ದಾರೆ. ಆದರೆ ಅವರಿಗೆ ಯಾರು ಸ್ಥಾನ ಬಿಟ್ಟುಕೊಡ್ತಾರೆ ಅನ್ನೋದು ಕುತೂಹಲ.