Asianet Suvarna News Asianet Suvarna News

ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿ ಸನ್'ರೈಸರ್ಸ್

ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಮುಂಬೈ ಆ ಬಳಿಕ ತವರಿನಲ್ಲಿ ಕೆಕೆಆರ್‌ ವಿರುದ್ಧ ರೋಚಕ ಜಯಸಾಧಿಸಿತ್ತು. ಈ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ರೋಹಿತ್‌ ಶರ್ಮಾ, ಲಸಿತ್‌ ಮಾಲಿಂಗಾ ಮತ್ತು ಜಸ್ಟ್ರೀತ್‌ ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

Today Fight with Sunrisers Hyderabad vs Mumbai Indians

ಮುಂಬೈ(ಏ.12): ವಾಂಖೆಡೆ ಪಿಚ್‌ನಲ್ಲಿ ಕಳೆದ 2 ಪಂದ್ಯಗಳಲ್ಲೂ ಸ್ಪರ್ಧಾತ್ಮಕ ಮೊತ್ತ ಮೂಡಿಬಂದಿದ್ದು, ಇದು ಬ್ಯಾಟ್ಸ್‌ಮನ್‌ ಸ್ನೇಹಿ ತಾಣ ಎಂಬುದಂತೂ ಖಾತ್ರಿಯಾಗಿದೆ. ವೇಗದ ಹಾಗೂ ಸ್ಪಿನ್‌ ಬೌಲರ್‌ಗಳಿಗೂ ಸ್ಪಂದಿಸಿರುವ ಪಿಚ್‌ ಮತ್ತೊಂದು ರೋಚಕ ಸೆಣಸಾಟದ ಮುನ್ಸೂಚನೆ ನೀಡಿದೆ.
ಸತತ 2 ಪಂದ್ಯಗಳಲ್ಲಿನ ಗೆಲುವಿನೊಂದಿಗೆ ಬೀಗುತ್ತಿರುವ ಸನ್‌ರೈಸ​ರ್‍ಸ್ ಹೈದರಾಬಾದ್‌ 10ನೇ ಐಪಿಎಲ್‌ನ 10ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಜಯಭೇರಿ ಬಾರಿಸಲು ಸಜ್ಜಾಗಿದ್ದು, ಆತಿಥೇಯ ಮುಂಬೈ ಇಂಡಿಯನ್ಸ್‌'ಗೆ ಮತ್ತೊಂದು ಸವಾಲು ಎದುರಾಗಿದೆ.ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುಲಿರುವ ಪಂದ್ಯವು ತೀವ್ರ ಕೌತುಕ ಕೆರಳಿಸಿದೆ. ಐಪಿಎಲ್‌ ಇತಿಹಾಸದಲ್ಲಿ ಇತ್ತಂಡಗಳಿಗೂ ಆಡಿದ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು ಇಂದಿನ ಪಂದ್ಯದಲ್ಲಿ ಯಾರು ಯಾರನ್ನು ಮಣಿಸುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಆತ್ಮವಿಶ್ವಾಸದಲ್ಲಿ ಮುಂಬೈ

ತನ್ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಮುಂಬೈ ಆ ಬಳಿಕ ತವರಿನಲ್ಲಿ ಕೆಕೆಆರ್‌ ವಿರುದ್ಧ ರೋಚಕ ಜಯಸಾಧಿಸಿತ್ತು. ಈ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ರೋಹಿತ್‌ ಶರ್ಮಾ, ಲಸಿತ್‌ ಮಾಲಿಂಗಾ ಮತ್ತು ಜಸ್ಟ್ರೀತ್‌ ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಪ್ರಚಂಡ ಫಾರ್ಮ್'ನಲ್ಲಿ ಸನ್‌

ಸತತ 2 ಗೆಲುವು ಸಾಧಿಸಿ ಬೀಗುತ್ತಿರುವ ಹಾಲಿ ಚಾಂಪಿಯನ್‌ ಸನ್‌ರೈಸ​ರ್‍ಸ್ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲಿಯೂ ಬಲಿಷ್ಠವಾಗಿದೆ. ವಾರ್ನರ್‌ ತಂಡದ ಬ್ಯಾಟಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಮುಸ್ತಾಫಿಜುರ್‌ ಇಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

ತಂಡಗಳು

ಸನ್'ರೈಸರ್ಸ್ ಹೈದರಾಬಾದ್

ಡೇವಿಡ್‌ ವಾರ್ನರ್‌, ಶಿಖರ್‌ ಧವನ್‌, ಮೋಸೆಸ್‌ ಹೆನ್ರಿಕ್ಸ್‌, ಯುವರಾಜ್‌ ಸಿಂಗ್‌, ದೀಪಕ್‌ ಹೂಡಾ, ಬಿಜೆ ಕಟಿಂಗ್‌, ನಮಾನ್‌ ಓಜಾ (ವಿಕೆಟ್‌ಕೀಪರ್‌), ಬಿಪುಲ್‌ ಶರ್ಮಾ, ಭುವನೇಶ್ವರ್‌ ಕುಮಾರ್‌, ಆಶೀಶ್‌ ನೆಹ್ರಾ ಮತ್ತು ರಶೀದ್‌ ಖಾನ್‌. ಪಾರ್ಥೀವ್‌ ಪಟೇಲ್‌ (ವಿಕೆಟ್‌ಕೀಪರ್‌), ಜೋಸ್‌ ಬಟ್ಲರ್‌, ನಿತೀಶ್‌ ರಾಣಾ,

ಮುಂಬೈ ಇಂಡಿಯನ್ಸ್

ರೋಹಿತ್‌ ಶರ್ಮಾ (ನಾಯಕ), ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲಾರ್ಡ್‌, ಕೃನಾಲ್‌ ಪಾಂಡ್ಯ, ಹರ್ಭಜನ್‌ ಸಿಂಗ್‌, ಟಿಮ್‌ ಸೌಥೀ ಲಸಿತ್‌ ಮಾಲಿಂಗ ಮತ್ತು ಜಸ್ಟ್ರೀತ್‌ ಬುಮ್ರಾ.

ಸ್ಥಳ: ಮುಂಬೈ, ಪಂದ್ಯ ಆರಂಭ: ರಾತ್ರಿ 8.00,

ನೇರ ಪ್ರಸಾರ: ಸೋನಿ ಸಿಕ್ಸ್‌ 

ವಾಂಖೆಡೆ ಪಿಚ್‌ನಲ್ಲಿ ಗರಿಷ್ಠ-ಕನಿಷ್ಠ ಸ್ಕೋರ್‌ ಚಿತ್ರಣ ಗರಿಷ್ಠ ಸ್ಕೋರ್‌: 235/1 (20) (2015ರಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ) ಕನಿಷ್ಠ ಸ್ಕೋರ್‌: 67/10 (15.2) (2008ರಲ್ಲಿ ಮುಂಬೈ ವಿರುದ್ಧ ಕೆಕೆಆರ್‌)

Follow Us:
Download App:
  • android
  • ios