ಏಪ್ರಿಲ್ 8, ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಆರ್'ಸಿಬಿ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ತಂಡಗಳು ಸೆಣಸಾಡಲಿವೆ.
ಬೆಂಗಳೂರು(ಮಾ. 31): ಐಪಿಎಲ್ ಟೂರ್ನಿಗೆ ಕ್ಷಣಗಣನೆ ನಡೆಯುತ್ತಿದೆ. ಏಪ್ರಿಲ್ 5ರಂದು ಹೈದರಾಬಾದ್'ನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಅದರಲ್ಲಿ ಸನ್'ರೈಸರ್ಸ್ ಮತ್ತು ಆರ್'ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಅದಾದ ಬಳಿಕ ಬೆಂಗಳೂರಿಗರು ಏ. 8ರಂದು ತವರಿನಲ್ಲಿ ಪಂದ್ಯವನ್ನಾಡಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಪಂದ್ಯ ಇದಾಗಿರುವುದರಿಂದ ಸಹಜವಾಗಿಯೇ ದೊಡ್ಡ ಪ್ರಚಾರ ಪಡೆದಿದೆ. ದುಬಾರಿಯಾದರೂ ಬಹುತೇಕ ಎಲ್ಲ ಟಿಕೆಟ್'ಗಳು ಮಾರಾಟಗೊಂಡಿವೆ. ಕನಿಷ್ಠ ದರ 800 ರೂಪಾಯಿ ಇದೆ. ಸ್ಟಾರ್'ಗಳಿಗೆಂದೇ ಇರುವ ಪಿ2 ಸ್ಟ್ಯಾಂಡ್'ನಲ್ಲಿನ ಟಿಕೆಟ್ ಬೆಲೆ ಬರೋಬ್ಬರಿ 37 ಸಾವಿರ ರೂಪಾಯಿ ಇದೆ.
ಏಪ್ರಿಲ್ 8, ಸಂಜೆ 6:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಆರ್'ಸಿಬಿ ಮತ್ತು ಡೆಲ್ಲಿ ಡೇರ್'ಡೆವಿಲ್ಸ್ ತಂಡಗಳು ಸೆಣಸಾಡಲಿವೆ.
ಟಿಕೆಟ್ ದರಗಳೆಷ್ಟು?
P2 ಸ್ಟ್ಯಾಂಡ್: 37,000 ರೂಪಾಯಿ
ಕಾರ್ಪೊರೇಟ್: 19,000 ರೂ.
ಎಕ್ಸಿಕ್ಯೂಟಿವ್: 11,000 ರೂ.
ಟೆರೇಸ್: 9,000 ರೂ.
ಅನೆಕ್ಸ್: 5,000 ರೂ.
ಈ ಮೇಲಿನ ಟಿಕೆಟ್'ಗಳನ್ನು ಖರೀದಿಸಬೇಕೆಂದಿದ್ದರೆ ತ್ವರೆ ಮಾಡಿ. ಕೆಲವೇ ಸೀಟುಗಳು ಬಾಕಿ ಇವೆ. ಸದಾಶಿವನಗರದ ಇಂಡಿಯನ್ ಬ್ಯಾಂಕ್ ಮತ್ತು ಕೆಎಸ್'ಸಿಎ ಸ್ಟೇಡಿಯಂನಲ್ಲಿ ನೀವು ಟಿಕೆಟ್ ಕಾಯ್ದಿರಿಸಬಹುದಂತೆ.
