ಐಸಿಸಿ ಕನಸಿನ ತಂಡದಲ್ಲಿ ಐವರು ಭಾರತೀಯರು, ಆಸ್ಟ್ರೇಲಿಯಾದ ಒಬ್ಬರಿಲ್ಲ
ದುಬೈ(ಫೆ.05): ಅಂಡರ್-19 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಐಸಿಸಿ ಭಾನುವಾರ ವಿಶ್ವಕಪ್‌ನ ಕನಸಿನ ತಂಡ ಪ್ರಕಟಿಸಿತು. ತಂಡದಲ್ಲಿ ಪೃಥ್ವಿ ಶಾ ಸೇರಿದಂತೆ ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಪಂದ್ಯಾವಳಿ ಯಲ್ಲಿ ಭಾರತ ಎಷ್ಟರ ಮಟ್ಟಿಗೆ ಪ್ರಾಬಲ್ಯ ಮೆರೆಯಿತು ಎಂಬುದಕ್ಕೆ ಈ ತಂಡವೇ ಸಾಕ್ಷಿ.
ದಕ್ಷಿಣ ಆಫ್ರಿಕಾದ ನಾಯಕ ರೇನಾರ್ಡ್ ವಾನ್ ಟೊಂಡರ್‌ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾದ ಓರ್ವ ಆಟಗಾರನಿಗೂ ಸ್ಥಾನ ಲಭಿಸಿಲ್ಲ. ಐವರು ಸದಸ್ಯರ ಸಮಿತಿ ತಂಡವನ್ನು ಆಯ್ಕೆ ಮಾಡಿತು.
ತಂಡದ ವಿವರ: ಪೃಥ್ವಿ ಶಾ (ಭಾರತ), ಮನ್ಜೋತ್ ಕಾಲ್ರಾ (ಭಾರತ), ಶುಭ್‌ಮನ್ ಗಿಲ್ (ಭಾರತ), ಫಿನ್ ಆಲೆನ್ (ನ್ಯೂಜಿಲೆಂಡ್) ರೇನಾರ್ಡ್ ವಾನ್ (ದ. ಆಫ್ರಿಕಾ, ನಾಯಕ), ವ್ಯಾಂಡಿಲೆ ಮಕ್ವೆಟು (ದ.ಆಫ್ರಿಕಾ), ಅನುಕೂಲ್ ರಾಯ್ (ಭಾರತ), ಕಮ್ಲೇಶ್ ನಾಗರಕೋಟಿ (ಭಾರತ), ಗೆರಾಲ್ಡ್ ಕೊಟ್ಜೆ (ದ.ಆಫ್ರಿಕಾ), ಕಾಯ್ಸ್ ಅಹ್ಮದ್ (ಆಫ್ಘಾನಿಸ್ತಾನ), ಶಹೀನ್ ಅಫ್ರಿದಿ (ಪಾಕಿಸ್ತಾನ), ಅಲಿಕ್ ಅತನಾಜೆ (ವಿಂಡೀಸ್, 12ನೇ ಆಟಗಾರ)

Last Updated 11, Apr 2018, 12:51 PM IST