ದ್ರಾವಿಡ್ ತಾವಾಡಿದ ಮೊದಲ ಹಾಗೂ ಕೊನೆಯ ಟಿ20 ಕ್ರಿಕೆಟ್ ಪಂದ್ಯವಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮಿಂಚಿದ್ದರು. ಇಂದಿಗೆ ಸರಿಯಾಗಿ ಏಳು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ದ್ರಾವಿಡ್ ಅಕ್ಷರಶಃ ಆರ್ಭಟಿಸಿದ್ದರು.

ಬೆಂಗಳೂರು(ಆ.31): ಭಾರತ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತು ಕಂಡ ಅಪರೂಪದ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. 'ದ ವಾಲ್' ಖ್ಯಾತಿಯ ದ್ರಾವಿಡ್ ಸಾಕಷ್ಟು ಬಾರಿ ಏಕಾಂಗಿಯಾಗಿ ಹೋರಾಡಿ ಭಾರತ ತಂಡಕ್ಕೆ ಗೆಲುವನ್ನು ತಂದಿತ್ತಿದ್ದಾರೆ.

ಮಂದಗತಿಯಲ್ಲಿ ಬ್ಯಾಟಿಂಗ್ ಮಾಡುವ ದ್ರಾವಿಡ್ ಸತತ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದು ನೆನಪಿದೆಯಾ..? ದ್ರಾವಿಡ್ ತಾವಾಡಿದ ಮೊದಲ ಹಾಗೂ ಕೊನೆಯ ಟಿ20 ಕ್ರಿಕೆಟ್ ಪಂದ್ಯವಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮಿಂಚಿದ್ದರು. ಇಂದಿಗೆ ಸರಿಯಾಗಿ ಏಳು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ದ್ರಾವಿಡ್ ಅಕ್ಷರಶಃ ಆರ್ಭಟಿಸಿದ್ದರು. ಸಮಿತ್ ಪಟೇಲ್ ಓವರ್'ನಲ್ಲಿ ದ್ರಾವಿಡ್ ಸತತ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿ ಮಿಂಚಿದ್ದರು. ಹೀಗಿತ್ತು ಆ ಕ್ಷಣ...