ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಶ್ರೀಲಂಕಾ ನಾಯಕ ಉಫುಲ್ ತರಂಗಾ ಹಿಂದೆ ಸರಿದಿದ್ದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಸರಾ ಪೆರೇರಾಗೆ ನಾಯಕತ್ವ ಪಟ್ಟ ಕಟ್ಟಿದೆ.
ಕೊಲಂಬೊ(ಅ.22): ಶ್ರೀಲಂಕಾ ತಂಡದ ನಾಯಕನಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಕೊನೆಗೂ ನನ್ನ ಕನಸು ಈಡೇರಿದೆ ಎಂದು ಶ್ರೀಲಂಕಾ ತಂಡದ ನೂತನ ನಾಯಕ ತಿಸಾರ ಪೆರೇರಾ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ನಿನ್ನೆಯಷ್ಟೇ ಪೆರೇರಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ನನ್ನ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಶ್ರೀಲಂಕಾ ತಂಡದ ನಾಯಕನಾಗುವುದು ನನ್ನ ಕನಸಾಗಿತ್ತು. ಅದು ಇಂದು ನನಸಾಗಿದೆ. ಇದರಿಂದ ತುಂಬಾ ಸಂತೋಷವಾಗಿದೆ ಎಂದು ಪೆರೇರಾ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಶ್ರೀಲಂಕಾ ನಾಯಕ ಉಫುಲ್ ತರಂಗಾ ಹಿಂದೆ ಸರಿದಿದ್ದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಸರಾ ಪೆರೇರಾಗೆ ನಾಯಕತ್ವ ಪಟ್ಟ ಕಟ್ಟಿದೆ.