ಟೀಂ ಇಂಡಿಯಾದಲ್ಲಿ ಈಗ ಫಿಟ್ನೆಸ್ ಮಂತ್ರ. ಯಾಕೆ ಗೊತ್ತಾ..? ಟೀಮ್ಗೆ ಸೆಲೆಕ್ಟ್ ಆಗಬೇಕಾದರೆ ಫಿಟ್ನೆಸ್ ಮಹತ್ವದ್ದು. ಈಗ ಟೀಂ ಇಂಡಿಯಾದಲ್ಲಿ ಯಾರು ಫಿಟ್ ಆಗಿದ್ದಾರೆ ಗೊತ್ತಾ? ಬಿಸಿಸಿಐ ನಡೆಸಿದ ಯೋ-ಯೋ ಟೆಸ್ಟ್ನಲ್ಲಿ ಗರಿಷ್ಠ ಅಂಕ ಪಡೆದಿರೋಱರು ಗೊತ್ತಾ? ಇಲ್ಲಿದೆ ನೋಡಿ ವಿವರ
ಸದ್ಯ ಭಾರತೀಯ ಕ್ರಿಕೆಟ್ನಲ್ಲಿ ಫಿಟ್ನೆಸ್ನದ್ದೇ ಚಿಂತೆ. ಯಾಕೆ ಗೊತ್ತಾ..? ಫಾರ್ಮ್'ಗಿಂತ ಫಿಟ್ನೆಸ್ ಬಹಳ ಮಹತ್ವ ಪಡೆದಿದೆ. ಯಾಕೆ ಗೊತ್ತಾ.? ಟೀಂ ಇಂಡಿಯಾಗೆ ಸೆಲೆಕ್ಟ್ ಆಗಬೇಕಾದರೆ ಮೊದಲು ಫಿಟ್ನೆಸ್ ಸಾಬೀತು ಪಡಿಸಬೇಕು. ಅದರಲ್ಲೂ ಬಿಸಿಸಿಐ ಹೊಸದಾಗಿ ಪರಿಚಯಿಸಿರುವ ಯೋ-ಯೋ ಟೆಸ್ಟ್ನಲ್ಲಿ ಪಾಸಾಗಬೇಕು. ಸದ್ಯ ಟೀಂ ಇಂಡಿಯಾದಲ್ಲಿರುವ ಆಟಗಾರರಲ್ಲಿ ಎಲ್ಲರೂ ಈ ಯೋ-ಯೋ ಟೆಸ್ಟ್'ನಲ್ಲಿ ಪಾಸಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ ಅದರಲ್ಲಿ ಯಾರು ಫುಲ್ ಫಿಟ್ ಆಗಿದ್ದಾರೆ ಗೊತ್ತಾ..?
ವಿರಾಟ್ ಕೊಹ್ಲಿಯಾ..? ಅಥವಾ..?
ವಿರಾಟ್ ಕೊಹ್ಲಿಯನ್ನು ನೋಡಿದೋರೆಲ್ಲಾ ಅವರ ಫಿಟ್ನೆಸ್ ಬಗ್ಗೆ ಮಾತನಾಡಿಕೊಳ್ತಾರೆ. ಕೊಹ್ಲಿ ಫುಲ್ ಫಿಟ್ ಆಗಿದ್ದಾರೆ. ಇದುವರೆಗೂ ಇಂಜುರಿ ಅಂತ ಯಾವುದೇ ಸಿರೀಸ್ ಮಿಸ್ ಮಾಡಿಕೊಂಡಿಲ್ಲ. ಅವರೇ ಟೀಂ ಇಂಡಿಯಾದಲ್ಲಿ ಫಿಟ್ನೆಸ್ನಲ್ಲಿ ನಂಬರ್ ವನ್ ಆಟಗಾರ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ವಿರಾಟ್ಗಿಂತ ಫುಲ್ ಫಿಟ್ ಆಗಿರುವ ಆಟಗಾರ ಟೀಮ್ ಇಂಡಿಯಾದಲ್ಲಿದ್ದಾನೆ. ಆತ ಬೇಱರು ಅಲ್ಲ. ನಮ್ಮ ಕರ್ನಾಟಕ ಪ್ಲೇಯರ್.
ಕೊಹ್ಲಿಗಿಂತ ಪಾಂಡೆಯೇ ಫಿಟ್: ಯೋ-ಯೋ ಟೆಸ್ಟ್'ನಲ್ಲಿ ಕೊಹ್ಲಿ 19, ಪಾಂಡೆಗೆ 19.2 ಅಂಕ

ಆಸ್ಟ್ರೇಲಿಯಾ ಸರಣಿಗೂ ಮುನ್ನ ಯೋ-ಯೋ ಟೆಸ್ಟ್ ಮಾಡಲಾಯ್ತು. ಅದರಲ್ಲಿ ವಿರಾಟ್ ಕೊಹ್ಲಿಗಿಂತ ಮನೀಶ್ ಪಾಂಡೆಯೇ ಹೆಚ್ಚು ಅಂಕ ಪಡೆದಿದ್ದಾರೆ. ಯೋ-ಯೋ ಟೆಸ್ಟ್ನಲ್ಲಿ ಕೊಹ್ಲಿ 19 ಅಂಕ ಗಳಿಸಿದ್ದರೆ, ಮನೀಷ್ 19.2 ಅಂಕ ಗಳಿಸಿದ್ದಾರೆ. ಅಲ್ಲಿಗೆ ಕೊಹ್ಲಿಗೆ ಸವಾಲೊಡ್ಡುವಷ್ಟು ಫಿಟ್ ಪಾಂಡೆಯಲ್ಲಿದೆ. ಅವರು ಮೈದಾನದಲ್ಲಿ ಪಾದರಸದಂತೆ ಓಡುವುದನ್ನ ನೋಡಿರೆ ಗೊತ್ತಾಗುತ್ತೆ ಪಾಂಡೆ ಎಷ್ಟು ಫಿಟ್ ಆಗಿದ್ದಾರೆ ಅಂತ.

ಭಾರತದಲ್ಲಿ ಮನೀಶ್ ಪಾಂಡೆಯಷ್ಟು ಫಿಟ್ ಆಗಿರುವ ಆಟಗಾರ ಮತ್ತೊಬ್ಬನಿಲ್ಲ. ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಮೇಲೆ ಅವರು ಫಿಟ್ನೆಸ್ ಸಾಧಿಸಿಲ್ಲ. ಚಿಕ್ಕವಯಸ್ಸಿನಿಂದಲೂ ಪಾಂಡೆ ಫಿಟ್. ರಣಜಿ ಆಡುವಾಗಲೂ ಅವರ ವಿಕೆಟ್ ಟು ವಿಕೆಟ್ ಓಟ ಅದ್ಭುತವಾಗಿತ್ತು. ಈಗಲೂ ಅವರು ವಿಕೆಟ್ ಟು ವಿಕೆಟ್ ರನ್ ಕದಿಯೋದ್ರಲ್ಲಿ ಎಕ್ಸ್ಫಟ್. ಅವರ ಫೀಲ್ಡಿಂಗ್ ನೋಡಿದ್ರೆ ಗೊತ್ತಾಗುತ್ತೆ ಅವರೆಷ್ಟು ಫಿಟ್ ಆಗಿದ್ದಾರೆ ಅಂತ. ಗಾಳಿಯಲ್ಲಿ ಹಾರಿ ಚೆಂಡು ಹಿಡಿಯುತ್ತಾರೆ.
ಯೋ-ಯೋ ಟೆಸ್ಟ್ ಪಾಸಾಗಲು 16.1 ಅಂಕ ಪಡೆಯಬೇಕು: 16.1ರಿಂದ 17.5ಕ್ಕೆ ಅಂಕ ಏರಿಸುವ ಸಾಧ್ಯತೆ
ಬಿಸಿಸಿಐ ನಿಯಮದ ಪ್ರಕಾರ ಯೋ-ಯೋ ಟೆಸ್ಟ್ನಲ್ಲಿ ಉತ್ತೀರ್ಣರಾಗಲು 16.1 ಸ್ಕೋರ್ ಆಯ್ಕೆಗೆ ಮಾನದಂಡ. ಇದು ಸದ್ಯದಲ್ಲೇ 17.5ಕ್ಕೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಯಾಕೆಂದರೆ ಆಸ್ಟ್ರೇಲಿಯಾದಂಥ ದೇಶದಲ್ಲಿ ಈ ಮಾನದಂಡ ಸುಮಾರು 20 ಸ್ಕೋರ್'ನಷ್ಟಿದೆ. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಈ ಯೋ-ಯೋ ಟೆಸ್ಟ್ನಲ್ಲಿ ಫೇಲಾಗುತ್ತಿದ್ದಾರೆ. ಅಷ್ಟೇ ಯಾಕೆ ಇನ್ನೂ 18 ವರ್ಷ ದಾಟದ ವಾಷಿಂಗ್ಟನ್ ಸುಂದರ್ ಯೋ-ಯೋ ಪರೀಕ್ಷೆ ಪಾಸ್ ಆಗುವಲ್ಲಿ ವಿಫಲರಾಗಿದ್ದರಿಂದಲೇ ಅವರಿಗೆ ಆಸ್ಟ್ರೇಲಿಯಾ ಸರಣಿ ಮಿಸ್ ಆಗಿದ್ದು. ಆದ್ರೆ 38 ವರ್ಷದ ಆಶೀಶ್ ನೆಹ್ರಾ ಈ ಟೆಸ್ಟ್ನಲ್ಲಿ ಪಾಸಾಗಿದ್ದಾರೆ. ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ಈಗ ಫಿಟ್ನೆಸ್ ಮಂತ್ರ.
