ಐಸಿಸಿಯ ಪ್ರಮುಖ ಮೂರು ಟೂರ್ನಿಗಳಾದ ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಟ್ಟ ಟೀಂ ಇಂಡಿಯಾದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ.
ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ಎಂಬ ಕೀರ್ತಿಗೆ ಭಾಜನರಾಗಿರುವ ಮಹೇಂದ್ರ ಸಿಂಗ್ ಧೋನಿ ದಿಢೀರ್ ಎನ್ನುವಂತೆ ಏಕದಿನ ಹಾಗೂ ಟಿ-20 ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಐಸಿಸಿಯ ಪ್ರಮುಖ ಮೂರು ಟೂರ್ನಿಗಳಾದ ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಟ್ಟ ಟೀಂ ಇಂಡಿಯಾದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ.
ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕೊನೆಯುಸಿರೆಳೆಯುವ ಮುನ್ನ ಧೋನಿ ಬಾರಿಸಿದ ವಿಶ್ವಕಪ್ ವಿನ್ನಿಂಗ್ ಶಾಟ್(ಸಿಕ್ಸರ್) ನೋಡಲು ಬಯಸುತ್ತಾರಂತೆ. ಕೂಲ್ ಕ್ಯಾಪ್ಟನ್, ಬೆಸ್ಟ್ ಮ್ಯಾಚ್ ಫಿನಿಷರ್ ಎಂದೇ ಗುರುತಿಸಿಕೊಂಡಿರುವ ಧೋನಿಯಿಂದ ಮತ್ತಷ್ಟು ಅತ್ಯುತ್ತಮ ಇನಿಂಗ್ಸ್ ಮೂಡಿಬರಲಿ ಎಂದು ಸುವರ್ಣ ನ್ಯೂಸ್ ಹಾರೈಸುತ್ತದೆ.
ವಿಶ್ವಕಪ್ ಕಪ್ ತಂದುಕೊಟ್ಟ ಆ ಕ್ಷಣಗಳು ನಿಮಗಾಗಿ...