Asianet Suvarna News Asianet Suvarna News

ಇದೇ ದಿನ, ಆ ವರ್ಷ, ಅದೇ ಕೊನೆಯ ಓವರ್..!

This day that year

ನವದೆಹಲಿ(ಸೆ. 24): ಯಾರು ಊಹಿಸದ ರೀತಿಯಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ, 2007ರಲ್ಲಿ ಮೊದಲ ಟಿ-20 ವಿಶ್ವಕಪ್ ನನ್ನು ಜಯಿಸಿದ್ದು ಇತಿಹಾಸ.

ಈ ಇತಿಹಾಸಕ್ಕೆ ಇಂದಿಗೆ 9 ವರ್ಷಗಳು ತುಂಬಿದೆ. ಅಂದಿನಿಂದ ಇಂದಿನವರೆಗೆ ಭಾರತ ತಂಡ ಹಲವು ಪ್ರಶಸ್ತಿಗಳನ್ನು ಜಯಿಸಿದರು ಈ ಪಂದ್ಯ ಮಾತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ. ಕಾರಣ ಫೈನಲ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧವೇ ಗೆಲುವು ಸಾಧಿಸಿದ್ದು ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿತ್ತು. 

2007ರ ಮೊದಲ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 157 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಮೊನೆಯ ಓವರ್ ನಲ್ಲಿ 13 ರನ್ ದಾಖಲಿಸಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತ್ತು. ಈ ಮೂಲಕ ಭಾರತ ತಂಡ ಮೊದಲ ಟಿ-20 ವಿಶ್ವಕಪ್'ಗೆ ಮುತ್ತಿಟ್ಟಿತ್ತು. 

ಇಂದಿದೆ ಈ ವಿಶ್ವಕಪ್ ಗೆದ್ದು ಭಾರತ 9 ವರ್ಷಗಳಾಗಿದ್ದರು ಫೈನಲ್ ಪಂದ್ಯದ ಕೊನೆಯ ಓವರ್ ಆನ್ನು ಅಭಿಮಾನಿಗಳಂತು ಮರೆಯಲು ಸಾಧ್ಯವೇ ಇಲ್ಲ. ಮತ್ತೊಮ್ಮೆ ನಿಮಗಾಗಿ ಫೈನಲ್ ಪಂದ್ಯದ ಕೊನೆಯ ಓವರ್... 

 

Latest Videos
Follow Us:
Download App:
  • android
  • ios