ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿತು.
ಬೆಂಗಳೂರು(ಮಾ.29): ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ತ್ಯುನೀಸ್ ಡಿ ಬ್ರಿಯಾನ್ ಹಾಗೂ ಅನುಭವಿ ಆಟಗಾರ ಹಾಶೀಂ ಆಮ್ಲಾ ಅವರ ವಿಚಿತ್ರ ರನೌಟ್'ಗೆ ಹ್ಯಾಮಿಲ್ಟನ್ ಟೆಸ್ಟ್ ಪಂದ್ಯ ಸಾಕ್ಷಿಯಾಯಿತು.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಹಾಶೀಂ ಆಮ್ಲಾ ಮಿಡ್ ಆಫ್ ಕಡೆ ಚೆಂಡನ್ನು ಬಾರಿಸಿ ಒಂದು ರನ್ ಗಳಿಸಲು ಓಡಿದರು. ಆದರೆ ಜತೆಯಾಟಗಾರ ಆಮ್ಲಾ ಅವರಿಗೆ ಸರಿಯಾಗಿ ಪ್ರತಿಕ್ರಿಯಿಸದೆ ಪರಸ್ಪರ ಡಿಕ್ಕಿ ಹೊಡೆದುಕೊಂಡರು..
ಮುಂದೇನಾಯ್ತು ನೀವೇ ನೋಡಿ...
ನ್ಯೂಜಿಲ್ಯಾಂಡ್ ತಂಡ ಬಹುತೇಕ ಗೆಲುವಿನ ಸನೀಹಕ್ಕೆ ಬಂದಿದ್ದರೂ ವರುಣ ಆರ್ಭಟದಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿತು.
