ಕೌಂಟಿ ಕ್ರಿಕೆಟ್: ಕೊಹ್ಲಿ ಬದಲು ಸರ್ರೆ ತಂಡವನ್ನು ಪ್ರತಿನಿಧಿಸಲಿದ್ದಾರೆ ಈ ಕ್ರಿಕೆಟಿಗ

Theunis de Bruyn Surrey sign South Africa batsman as Virat Kohli replacement
Highlights

25 ವರ್ಷದ ಥೇನಿಯಸ್ ಡಿ ಬ್ರುನ್ ಇದೀಗ ಈ ತಿಂಗಳಾಂತ್ಯದಲ್ಲಿ ಸೋಮರ್’ಸೆಟ್ ಹಾಗೂ ಯಾರ್ಕ್’ಶೈರ್ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಲಂಡನ್[ಜೂ.17]: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಚಾಂಪಿಯನ್'ಶಿಪ್‌ನ ಸರ್ರೆ ತಂಡದಲ್ಲೀಗ ವಿರಾಟ್ ಕೊಹ್ಲಿ ಬದಲಿಗೆ ದಕ್ಷಿಣ ಆಫ್ರಿಕಾದ ಥೇನಿಯಸ್ ಡಿ ಬ್ರುನ್ ಸ್ಥಾನ ಪಡೆದಿದ್ದಾರೆ. 

ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರುವು ಸಲುವಾಗಿ ಕೊಹ್ಲಿ ಕೌಂಟಿಯಲ್ಲಿ ಆಡಲು ಬಯಸಿದ್ದರು. ಇದಕ್ಕಾಗಿ ಆಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಟೆಸ್ಟ್‌ನಿಂದಲೂ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಐಪಿಎಲ್ ವೇಳೆ ಕುತ್ತಿಗೆ ನೋವಿಗೆ ತುತ್ತಾಗಿದ್ದರಿಂದ ಕೌಂಟಿ ಆಸೆಯನ್ನು ಕೈಬಿಡಬೇಕಾಯಿತು. ಕೊಹ್ಲಿ ಈ ತಿಂಗಳು ಸರ್ರೆ ಪರವಾಗಿ 3 ಏಕದಿನ ಮತ್ತು 3 ನಾಲ್ಕು ದಿನಗಳ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕಿತ್ತು.

25 ವರ್ಷದ ಥೇನಿಯಸ್ ಡಿ ಬ್ರುನ್ ಇದೀಗ ಈ ತಿಂಗಳಾಂತ್ಯದಲ್ಲಿ ಸೋಮರ್’ಸೆಟ್ ಹಾಗೂ ಯಾರ್ಕ್’ಶೈರ್ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ.

loader