Asianet Suvarna News Asianet Suvarna News

ಅದ್ಭುತ ಫಾರ್ಮ್ನಲ್ಲಿದ್ದರೂ ಲಂಕಾ ಟಿಕೆಟ್ ಮಿಸ್: ಯಾರಿಗೆಲ್ಲ ನಿರಾಸೆಯಾಗಿದೆ ಗೊತ್ತಾ..?

ಶ್ರೀಲಂಕಾ ಟೆಸ್ಟ್​ ಸಿರೀಸ್​ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆದರೆ ಐವರು ಪ್ರಮುಖ ಆಟಗಾರರು ಟೆಸ್ಟ್ ಟೀಮ್​'ಗೆ ಸೆಲೆಕ್ಟ್ ಆಗಲು ವಿಫಲರಾಗಿದ್ದಾರೆ. ಅದ್ಭುತ ಆಟಗಾರರಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾದರೆ ಲಂಕಾ ಫ್ಲೈಟ್ ಮಿಸ್ ಮಾಡಿಕೊಂಡವರು ಯಾರ್ಯಾರು? ಇಲ್ಲಿದೆ ವಿವರ.

These 5 Team Indias Players Did Not Get A Chance To Play Against Srilanka

ಮುಂಬೈ(ಜು.13): ಶ್ರೀಲಂಕಾ ಟೆಸ್ಟ್​ ಸಿರೀಸ್​ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆದರೆ ಐವರು ಪ್ರಮುಖ ಆಟಗಾರರು ಟೆಸ್ಟ್ ಟೀಮ್​'ಗೆ ಸೆಲೆಕ್ಟ್ ಆಗಲು ವಿಫಲರಾಗಿದ್ದಾರೆ. ಅದ್ಭುತ ಆಟಗಾರರಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾದರೆ ಲಂಕಾ ಫ್ಲೈಟ್ ಮಿಸ್ ಮಾಡಿಕೊಂಡವರು ಯಾರ್ಯಾರು? ಇಲ್ಲಿದೆ ವಿವರ.

ಕ್ರಿಕೆಟ್​ನಲ್ಲಿ ಕೇವಲ ಪ್ರತಿಭೆ ಇದ್ದರೆ ಸಾಲದು. ಅದೃಷ್ಟವೂ ಇರಬೇಕು. ಶ್ರೀಲಂಕಾ ಟೂರ್​ಗೆ ಸೆಲೆಕ್ಟ್​ ಆಗಿರೂ ಭಾರತ ಟೆಸ್ಟ್​ ತಂಡದಲ್ಲಿ ಇರುವವರೆಲ್ಲಾ ಅದ್ಭುತ ಆಟಗಾರರೇ. ಆದ್ರೆ ಅವರಷ್ಟೇ ಪ್ರತಿಭೆ ಇರುವ ಐವರು ಆಟಗಾರರು ಲಂಕಾ ಪ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಪ್ರತಿಭೆ ಇದ್ದರೂ ಅವರಿಗೆ ಅವಕಾಶ ಮಾತ್ರ ಸಿಕ್ಕಿಲ್ಲ. ಹೀಗಾಗಿ ಭಾರೀ ನಿರಾಸೆಯಾಗಿದ್ದಾರೆ.

ಲಂಕಾ ಫ್ಲೈಟ್ ಮಿಸ್​ - ಶಿಖರ್ ಧವನ್

ಓಪನರ್ ಶಿಖರ್ ಧವನ್ ಕಳಪೆ ಫಾರ್ಮ್'​ನಲ್ಲಿ ಇರುವ ಕಾರಣಕ್ಕೆ ಟೀಂ ಇಂಡಿಯಾದಿಂದ ಕಿಕೌಟ್ ಆಗಿದ್ದರು. ಆದರೆ ಕೆಎಲ್ ರಾಹುಲ್ ಇಂಜುರಿಯಾಗಿದ್ದರಿಂದ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆದರು. ಇಂಗ್ಲೆಂಡ್ ಮತ್ತು ವೆಸ್ಟ್​ ಇಂಡೀಸ್'​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಅವರಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅಭಿನವ್ ಮುಕುಂದ್ ಬದಲು ಗಬ್ಬರ್ ಸಿಂಗ್​'ಗೆ ಚಾನ್ಸ್ ಕೊಡಬೇಕಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ.

ಲಂಕಾ ಫ್ಲೈಟ್ ಮಿಸ್​ - ಕರುಣ್ ನಾಯರ್

ಟೆಸ್ಟ್​ ಕ್ರಿಕೆಟ್​'ನಲ್ಲಿ ಭಾರತದ ಪರ ತ್ರಿಶತಕ ಬಾರಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿರುವುದು ಕನ್ನಡಿಗ ಕರುಣ್ ನಾಯರ್. ಆದರೆ ತ್ರಿವಿಕ್ರಮನಾದ ಬಳಿಕ ಅವರೆಕೋ ಕಳಪೆ ಫಾರ್ಮ್​'ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ಸಿರೀಸ್​'ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಐಪಿಎಲ್​'ನಲ್ಲೂ ಮುಗ್ಗರಿಸಿದರು. ಹೀಗಾಗಿ ಅವರನ್ನು ಡ್ರಾಪ್ ಮಾಡಿ ರೋಹಿತ್ ಶರ್ಮಾಗೆ ಚಾನ್ಸ್ ಕೊಡಲಾಗಿದೆ. ರೋಹಿತ್​ಗೆ ಹೋಲಿಸಿದರೆ, ಕರುಣ್​'ಗೆ ಚಾನ್ಸ್ ಕೊಡಬೇಕಿತ್ತು.

ಲಂಕಾ ಫ್ಲೈಟ್ ಮಿಸ್​ - ಶ್ರೇಯಸ್​ ಅಯ್ಯರ್​

ಮಿಡ್ಲ್ ಆರ್ಡರ್ ಸ್ಥಾನಕ್ಕೆ ಮುಂಬೈನ ಶ್ರೇಯಸ್​ ಅಯ್ಯರ್ ಸಹ ರೇಸ್​'ನಲ್ಲಿದ್ದರು. ಕರುಣ್ ನಾಯರ್ ಬದಲಿಗೆ ಅವರೇ ಆಯ್ಕೆಯಾಗ್ತಾರೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ರೋಹಿತ್ ಶರ್ಮಾಗೆ ಚಾನ್ಸ್ ಕೊಡಲಾಯ್ತು. ರೋಹಿತ್​ ಮತ್ತು ಕರುಣ್​ಗೆ ಹೋಲಿಸಿದ್ರೆ ಶ್ರೇಯಸ್​ ಅಯ್ಯರ್​ ಅದ್ಭುತ ಫಾರ್ಮ್​ನಲ್ಲಿದ್ದರು. ಆಸ್ಟ್ರೇಲಿಯಾ ವಿರುದ್ಧ ಕೊನೆ ಟೆಸ್ಟ್​ಗೂ ಸೆಲೆಕ್ಟ್ ಆಗಿದ್ದರು. ಡೊಮೆಸ್ಟಿಕ್​'ನಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ. ಅವರಿಗೂ ನಿರಾಸೆಯಾಗಿದೆ.

ಲಂಕಾ ಫ್ಲೈಟ್ ಮಿಸ್​ - ಅಮಿತ್ ಮಿಶ್ರಾ

ಅನಿಲ್ ಕುಂಬ್ಳೆ ಆಡುವಾಗ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಅಮಿತ್ ಮಿಶ್ರಾ, ಆಡಿರುವುದು ಕೆಲವೇ ಕೆಲ ಟೆಸ್ಟ್​ಗಳನ್ನ ಮಾತ್ರ. ಯಾರಾದರೂ ಗಾಯಾಳುವಾದರೆ ಮಾತ್ರ ಅವರಿಗೆ ಚಾನ್ಸ್ ನೀಡಲಾಗುತ್ತದೆ. ಆದರೆ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೂ ಅವರಿಗೆ ಲಂಕಾ ಪ್ಲೈಟ್ ಮಿಸ್ ಆಗಿದೆ. ಮಿಶ್ರಾ ಸ್ಥಾನಕ್ಕೆ ಕುಲ್​ದೀಪ್ ಯಾದವ್ ಕುತ್ತು ತಂದಿದ್ದಾರೆ. ವೆಸ್ಟ್ ಇಂಡೀಸ್'​ನಲ್ಲಿ ಪ್ರದರ್ಶನದಿಂದ ಕುಲ್​ದೀಪ್​ ಸೆಲೆಕ್ಟ್ ಆದ್ರೆ ಅಮಿತ್ ಕಿಕೌಟ್ ಆಗಿದ್ದಾರೆ.

ಲಂಕಾ ಫ್ಲೈಟ್ ಮಿಸ್​ - ಜಯಂತ್ ಯಾದವ್

ಟೀಂ ಇಂಡಿಯಾ ಕಳೆದ ವರ್ಷ ತವರಿನಲ್ಲಿ ಟೆಸ್ಟ್​​ ಸರಣಿ ಗೆಲ್ಲಲು ಮೂವರು ಸ್ಪಿನ್ನರ್ಸ್​ ಕಾರಣ. ಅದರಲ್ಲಿ ಜಯಂತ್ ಯಾದವ್ ಸಹ ಒಬ್ಬರು. ಆಲ್​ರೌಂಡ್ ಆಟಗಾರರಾಗಿರುವ ಜಯಂತ್, ಸ್ಪಿನ್ ಜೊತೆ  ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡಿದ್ದಾರೆ. ಆದ್ರೆ ಅವರ ಸ್ಥಾನಕ್ಕೂ ಕುತ್ತು ತಂದಿದ್ದು ಅದೇ ಕುಲ್​ದೀಪ್ ಯಾದವ್. ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್​​ ಅವರನ್ನ ಓವರ್​​ಟೇಕ್ ಮಾಡಿ ಸ್ಥಾನ ಗಿಟ್ಟಿಸಿಕೊಂಡ್ರು ಕುಲ್​ದೀಪ್. ಜಯಂತ್ ನಿರಾಸೆ ಅನುಭವಿಸಿದ್ರು.

ಈ ಐವರು ಆಟಗಾರರು ಆಯ್ಕೆ ಲಿಸ್ಟ್​​ನಲ್ಲಿದ್ದಾರೆ. ಯಾರಾದರೂ ಇಂಜುರಿಯಾದರೆ ಇವರಿಗೆ ಲಂಕಾ ಪ್ಲೈಟ್ ಟಿಕೆಟ್ ಸಿಗಲಿದೆ. ಅದಕ್ಕಾಗಿ ಇವರು ಕಾಯುತ್ತಿದ್ದಾರೆ. ಬ್ಯಾಡ್ ಲಕ್​ ಪ್ಲೇಯರ್ಸ್.

Follow Us:
Download App:
  • android
  • ios