ದ್ರಾವಿಡ್ ಹೇಳಿ ಕೊಡುವ ಮಾನವೀಯ, ಸರಳತೆಯ ಪಾಠ!
'ರಾಹುಲ್ ದ್ರಾವಿಡ್ ಜತೆ ಹೊಂದಿಕೊಳ್ಳಲು ಆಗುವುದಿಲ್ಲವೆಂದರೆ ಜೀವನದಲ್ಲಿ ಹೋರಾಟ ಅನಿವಾರ್ಯ...' ಎಂದಿದ್ದರು ಬ್ರೆಟ್ ಲೀ. #TheWall ಎಂದೇ ಖ್ಯಾತರಾದ ರಾಹುಲ್ ದ್ರಾವಿಡ್ ಮಾನವೀಯತೆ ಎಲ್ಲರಿಗೂ ಮಾದರಿ.
ಇತರೆ ಪೋಷಕರೊಂದಿಗೆ ಮಕ್ಕಳೊಂದಿಗೆ ವಿಜ್ಞಾನ ಪ್ರದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ರಾಹುಲ್ ಫೋಟೋ ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು.
ದೇಹ ನಿಷ್ಕ್ರಿಯಗೊಂಡವನ ಆಸೆ ಪೂರೈಸಲು ರಾಹುಲ್ ಗಂಟೆ ಕಾಲ ಮಾತನಾಡಿದ್ದರು. ಆಸ್ಪತ್ರೆಯಲ್ಲಿದ್ದ ರೋಗಿಗೆ ಖುದ್ದು ಬಂದು ಭೇಟಿಯಾಗದ್ದಕ್ಕೆ ಕ್ಷಮೆ ಕೋರಿದ್ದು, ದ್ರಾವಿಡ್ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ.
ಗೌರವ ಡಾಕ್ಟರೇಟ್ ಪಡೆಯಲು ಅರ್ಹರಲ್ಲ ಎನ್ನುವ ಕಾರಣಕ್ಕೆ ವಿವಿ ನೀಡಲು ಇಚ್ಛಿಸಿದ ಗೌರವವನ್ನು ನಯವಾಗಿಯೇ ತಿರಸ್ಕರಿಸಿದರು ದ್ರಾವಿಡ್.
. ಶ್ರೀ ಸಾಮಾನ್ಯನಂತೆಯೇ ದ್ರಾವಿಡ್ ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಆಟೋಗ್ರಾಫ್, ಸೆಲ್ಫೀಗೆ ಮುಗಿ ಬಿದ್ದರೆ, ಬೇರೆಯವರಿಗೆ ದಾರಿ ಬಿಡಲು ಹೇಳಿ, ನಗುಮೊಗದಿಂದ ಸಹಕರಿಸುತ್ತಾರೆ.
ಬೆಂಗಳೂರಿನಲ್ಲಿ ದ್ರಾವಿಡ್ ಆಟೋದಲ್ಲಿ ಪ್ರಯಾಣಿಸುವುದು ಕಾಮನ್.
ಒಮ್ಮೆ ಶ್ರೀ ಸಾಮಾನ್ಯನೊಂದಿಗೆ ಮಾತನಾಡುವಾಗ 'ನಾನು ರಾಹುಲ್, ನಿಮ್ಮನ್ನು ಭೇಟಿಯಾಗುತ್ತಿರುವುದು ಸಂತೋಷ ...' ಎಂದೇ ಜಗದ್ವಿಖ್ಯಾತ ಕ್ರಿಕೆಟಿಗ ಪರಿಚಯಿಸಿಕೊಂಡಿದ್ದು ಅವರ ಸರಳತೆಯನ್ನು ಎತ್ತಿ ಹಿಡಿಯುತ್ತದೆ.
ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗಲು ಒಮ್ಮೆ ಸಾವಿರಾರು ಮಂದಿ ದ್ರಾವಿಡ್ ಮನೆಗೆ ಆಗಮಿಸಿದ್ದರು. ಆದರೆ, ಅದರ ಹಿಂದಿನ ದಿನವೇ ರಾಹುಲ್ ತಂದೆ ಕೊನೆಯುಸಿರೆಳೆದಿದ್ದರು. ಆದರೂ ಅಭಿಮಾನಿಗಳನ್ನು ನಿರಾಶೆಗೊಳಿಸದೇ ಆಟೋಗ್ರಾಫ್ ನೀಡಿ, ಫೋಟೋ ತೆಗೆಸಿಕೊಳ್ಳಲು ಅನುವು ಮಾಡಿಕೊಟ್ಟರು.
ಒಮ್ಮೆ ಹೊಟೇಲ್‌ನಲ್ಲಿ ವೇಯ್ಟರ್‌ಗೆ ತೊಂದರೆ ನೀಡಬಾರದೆಂದು ಖುದ್ದು ಕ್ಯಾಶ್ ಕೌಂಟರ್ ಬಳಿ ಹೋಗಿ ತಮ್ಮ ಆರ್ಡರ್ ನೀಡಿ ಬಂದಿದ್ದರು.
'ನಾನೇನು ಮಾಡುತ್ತೀನೋ ಅದಕ್ಕಿಂತಲೂ ದೃಷ್ಟಿ ದೋಷವುಳ್ಳ ಕ್ರಿಕೆಟಿಗ ಮಾಡುವುದು ಹೆಚ್ಚು. ಅವರಿಗಾಗಿ ನಾವು ಏನಾದರೂ ಮಾಡಬೇಕು...' ಎಂದು ವಿಶೇಷ ಚೇತನವುಳ್ಳ ಕ್ರಿಕೆಟಿಗರನ್ನು ದ್ರಾವಿಡ್ ಒಮ್ಮೆ ಅಭಿನಂದಿಸಿದ್ದರು.
ಒಲಿಂಪಿಯನ್ಸ್ ಹಾಗೂ ಪ್ಯಾರಾಒಲಂಪಿಯನ್ಸ್ ಕ್ರೀಡಾಳುಗಳನ್ನು ಹುರಿದುಂಬಿಸಲು ಕ್ರಿಕೆಟಿಗ ದ್ರಾವಿಡ್, ಗೋ ಸ್ಪೋರ್ಟ್ಸ್ ಫೌಂಡೇಷನ್ ಸೇರಿಕೊಂಡಿದ್ದಾರೆ.