ಮೂರು ತಿಂಗಳ ದೀರ್ಘ ಕಾಲದ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್​​ ತಂಡ ಈಗ ಬರಿಗೈಲಿ ತವರಿಗೆ ಮರಳಿದೆ. ಟೆಸ್ಟ್​​, ಓನ್​ ಡೇ ಹಾಗೂ ಟಿ20 ಮೂರೂ ಪಾರ್ಮೆಟ್​​'ನಲ್ಲೂ ಆಂಗ್ಲರು ಪರಾಭವಗೊಂಡರು. ಆದರೆ ನಿಮಗೆ ಗೊತ್ತಿಲ್ಲ, ಇಂಗ್ಲೆಂಡ್​​ ಪಡೆಯ ಹಿನಾಯ ಸ್ಥಿತಿಗೆ ಕಾರಣ ಟೀಂ ಇಂಡಿಯಾ ಅಲ್ಲ ಬದಲಿಗೆ ಇಂಗ್ಲೆಂಡ್​​ ಆಟಗಾರರೇ. ಈ ಮೂರು ಸರಣಿಗಳನ್ನು ಗಮನಿಸಿದರೆ ಇಂಗ್ಲೆಂಡ್'​​​ನ ಕಾಮನ್​​ ಎಡವಟ್ಟು ಯಾವುದು ಅಂತ ತಿಳಿಯುತ್ತೆ. ಅದರ ಒಂದು ವರದಿ ಇಲ್ಲಿದೆ.

ಮೂರು ತಿಂಗಳ ದೀರ್ಘ ಕಾಲದ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್​​ ತಂಡ ಈಗ ಬರಿಗೈಲಿ ತವರಿಗೆ ಮರಳಿದೆ. ಟೆಸ್ಟ್​​, ಓನ್​ ಡೇ ಹಾಗೂ ಟಿ20 ಮೂರೂ ಪಾರ್ಮೆಟ್​​'ನಲ್ಲೂ ಆಂಗ್ಲರು ಪರಾಭವಗೊಂಡರು. ಆದರೆ ನಿಮಗೆ ಗೊತ್ತಿಲ್ಲ, ಇಂಗ್ಲೆಂಡ್​​ ಪಡೆಯ ಹಿನಾಯ ಸ್ಥಿತಿಗೆ ಕಾರಣ ಟೀಂ ಇಂಡಿಯಾ ಅಲ್ಲ ಬದಲಿಗೆ ಇಂಗ್ಲೆಂಡ್​​ ಆಟಗಾರರೇ. ಈ ಮೂರು ಸರಣಿಗಳನ್ನು ಗಮನಿಸಿದರೆ ಇಂಗ್ಲೆಂಡ್'​​​ನ ಕಾಮನ್​​ ಎಡವಟ್ಟು ಯಾವುದು ಅಂತ ತಿಳಿಯುತ್ತೆ. ಅದರ ಒಂದು ವರದಿ ಇಲ್ಲಿದೆ.

ದೀರ್ಘ ಕಾಲದ ಭಾರತ ಪ್ರವಾಸವನ್ನು ಅಂತ್ಯಗೊಳಿಸಿರುವ ಇಂಗ್ಲೆಂಡ್ ಸದ್ಯ ತವರಿಗೆ ಮರಳಿ ಸೋಲಿಗೆ ಕಾರಣವೇನು ಅಂತ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಭಾರತದ ಫ್ಲೈಟ್​​​ ಹತ್ತುವ ಮುನ್ನ ಬಲಿಷ್ಠ ತಂಡ ಎನ್ನಿಸಿಕೊಂಡಿದ್ದ ಇಂಗ್ಲೆಂಡ್​​, ಪ್ರವಾಸ ಮುಗಿಸಿ ಮತ್ತೆ ಇಂಗ್ಲೆಂಡ್​​ ತಲುಪುವ ವೇಳೆಗೆ ಡಮ್ಮಿ ಟೀಂ ಎನ್ನಿಸಿಕೊಂಡಿದೆ. ಅದಕ್ಕೆ ಕಾರಣವಾದರೂ ಏನು​ ಅಂತ ತಿಳಿದರೆ ನೀವು ನಿಜಕ್ಕೂ ಶಾಕ್​ ಆಗುತ್ತೀರಿ.

ಟೆಸ್ಟ್​​ ಸರಣಿಯಲ್ಲಿ ಮಹಾಪತನ ಕಂಡ ಕುಕ್​ ಪಡೆ: ಇಂಗ್ಲೆಂಡ್​​ಗೆ ಕಾಡಿದ ದಿಢೀರ್​ ಪತನದ ಭೂತ

​ಭಾರತಕ್ಕೆ ಕಾಲಿಟ್ಟಾಗ ಫುಲ್​​ ಜೋಶ್'​ನಲ್ಲಿದ್ದ ಇಂಗ್ಲೆಂಡ್​​​ ವಿಶ್ವಾಸದಿಂದಲೇ ಮೊದಲ ಟೆಸ್ಟ್​ ಆಡಿದ ಇಂಗ್ಲೆಂಡ್​​ ಡ್ರಾ ಮಾಡಿಕೊಳ್ತು. 2ನೇ ಟೆಸ್ಟ್​​ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಆಂಗ್ಲರು ಮಣ್ಣುಮುಕ್ಕಿದ್ರು. ಕುಕ್​​ ತೋಡಿದ ಅಳ್ಳಕ್ಕೆ ಅವರೇ ಬಿದ್ದರು. ದಿಢೀರ್ ಪತನದಿಂದ ಆಂಗ್ಲರು ತತ್ತರಿಸಿಹೋದರು.

2ನೇ ಟೆಸ್ಟ್​​.. ಮೊದಲ ಇನ್ನಿಂಗ್ಸ್​​​..: 80ರನ್​​​ಗಳಿಗೆ 5 ವಿಕೆಟ್​​​

2ನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟ್​​​ಮಾಡಿ 455 ರನ್​ ಪೇರಿಸಿತ್ತು. ಇದರ ಉತ್ತರವಾಗಿ ಬ್ಯಾಟ್​​ ಮಾಡಲು ಇಳಿದ ಇಂಗ್ಲೆಂಡ್ ಕೇವಲ 80ರನ್​​ ಗಳಿಸುವಷ್ಟರಲ್ಲೇ ಪ್ರಮುಖ 5 ವಿಕೆಟ್​​ ಕಳೆದುಕೊಳ್ತು. ಇದರೊಂದಿಗೆ ಮೊದಲ ಬ್ಯಾಟಿಂಗ್​ ವೈಫಲ್ಯ ಕಂಡಿತು.

2ನೇ ಟೆಸ್ಟ್​​.. ಎರಡನೇ ಇನ್ನಿಂಗ್ಸ್​​​..: 43 ರನ್​​​'ಗಳಿಗೆ 6 ವಿಕೆಟ್​​​

​​ಮೊದಲ ಇನ್ನಿಂಗ್ಸ್​'ನಲ್ಲಿ ಆರಂಭಿಕರ ಎಡವಟ್ಟನ್ನು ಏನ್​ಕ್ಯಾಷ್​​ ಮಾಡಿಕೊಂಡ ಭಾರತ ಇಂಗ್ಲೆಂಡ್​​ಗೆ 405ರನ್​ ಗಳ ಟಾರ್ಗೆಟ್​​​ ನೀಡಿತು. ಬೃಹತ್​​ ಟಾರ್ಗೆಟ್​'ನ್ನು ಬೆನ್ನತ್ತಿದ್ದ ಇಂಗ್ಲೆಂಡ್​​​​ 115 ರನ್'​ಗಳಿಗೆ 4 ವಿಕೆಟ್​​ ಕಳೆದುಕೊಂಡು ಮುನ್ನುಗ್ಗುತಿತ್ತು. ಆದರೆ 115ಕ್ಕೆ 4 ವಿಕೆಟ್​​ ಕಳೆದುಕೊಂಡಿದ್ದ ಇಂಗ್ಲೆಂಡ್​​​ 158 ರನ್​​ ಗಳಿಸುವಷ್ಟರಲ್ಲೆ ಆಲೌಟಾಗಿಬಿಡ್ತು. ಕೇವಲ 43 ರನ್​​ಗಳಿಗೆ 6 ವಿಕೆಟ್​​ ಕಳೆದುಕೊಳ್ಳುವ ಮೂಲಕ ಸರಣಿಯ ಮೊದಲ ಸೋಲನ್ನ ಒಪ್ಪಿಕೊಂಡಿತು.​​

3ನೇ ಟೆಸ್ಟ್​​.. ಎರಡನೇ ಇನ್ನಿಂಗ್ಸ್​​​..: 70 ರನ್​​​'ಗಳಿಗೆ 5 ವಿಕೆಟ್​​​

ಮೂರನೇ ಟೆಸ್ಟ್​​ನಲ್ಲಾದರೂ ಇಂಗ್ಲೆಂಡ್​​ ಬುದ್ಧಿ ಕಲಿಯುತ್ತದೆ ಅಂತ ಅಂದುಕೊಂಡರೆ, ನೋ ಚಾನ್ಸ್​​'ಲ್ಲೂ ಅವರ ಶೀಘ್ರ ಪತನ​​​​ ಮುಂದುವರಿತು. 3ನೇ ಟೆಸ್ಟ್'​​ನಲ್ಲಿ ಮೊದಲು ಬ್ಯಾಟ್​​ ಮಾಡಿದ್ದ ಇಂಗ್ಲೆಂಡ್​​​ 213ರನ್​​ಗಳಿಗೆ 5 ವಿಕೆಟ್​​ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ನಂತರ 70 ರನ್ ​ಗಳಿಸುವಷ್ಟರಲ್ಲೆ ಕೊನೆಯ 5 ವಿಕೆಟ್​ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ತಪ್ಪಿಗೆ ಇಂಗ್ಲೆಂಡ್​​​ ಭಾರಿ ಮೊತ್ತವನ್ನೇ ತೆರಬೇಕಾಯಿತು.

4ನೇ ಟೆಸ್ಟ್​​.. ಎರಡನೇ ಇನ್ನಿಂಗ್ಸ್​​​..: 54 ರನ್'​​​ಗಳಿಗೆ 7 ವಿಕೆಟ್​​​

4ನೇ ಟೆಸ್ಟ್​​ನಲ್ಲೂ ಕುಕ್​ ಪಡೆ ಮತ್ತೆ ಶೀಘ್ರ ಪತನವನ್ನೇ ಕಂಡಿತು. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​​​​ 400ರನ್​ ಪೇರಿಸಿತ್ತು. ಭಾರತ ಕೂಡ ಇದರ ಉತ್ತರವಾಗಿ 631ರನ್​ ಗಳಿಸಿತು. ಆದರೆ 2ನೇ ಇನ್ನಿಂಗ್ಸ್​​'ನಲ್ಲಿ ಆಂಗ್ಲರು ಮತ್ತೆ ಎಡವಿದರು, 141ರನ್​​ಗಳಿಗೆ 3 ವಿಕೆಟ್​​ ಮಾತ್ರ ಕಳೆದುಕೊಂಡಿದ್ದ ಕುಕ್​ ಪಡೆ 195ರನ್​ ಆಗುವಷ್ಟರಲ್ಲೇ ಆಲೌಟಾದರು. ಕೇವಲ 54ರನ್​​ಗಳಿಗೆ 7 ವಿಕೆಟ್​​ ಕಳೆದುಕೊಂಡು ಸೋಲು ಅನುಭವಿಸಿತು.​​​

5ನೇ ಟೆಸ್ಟ್​​.. ಎರಡನೇ ಇನ್ನಿಂಗ್ಸ್​​​..: 81 ರನ್​​​ಗಳಿಗೆ 8 ವಿಕೆಟ್​​​

ಕೊನೆಯ ಟೆಸ್ಟ್​​​ನಲ್ಲೂ ಇಂಗ್ಲೆಂಡ್​​​​ ಸ್ಥಿತಿ ಭಿನ್ನವಾಗೇನು ಇರಲಿಲ್ಲ. ಟೆಸ್ಟ್​​ ಸರಣಿಯ ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್​​ ಬ್ಯಾಟ್ಸ್​ಮನ್​ಗಳು ಭಾರತದ ಬೌಲಿಂಗ್​ಗೆ ಬೆಂಡಾಗಿ ಹೋಗಿದ್ದರು. ಪಂದ್ಯದ 2ನೇ ಇನ್ನಿಂಗ್ಸ್​​ ವೇಳೆ 126ಕ್ಕೆ 2 ವಿಕೆಟ್​​ ಕಳೆದುಕೊಂಡು ಡ್ರಾ ಮಾಡಿಕೊಳ್ಳುವ ಇರಾದೆ ಒಟ್ಟುಕೊಂಡಿದ್ದ ಇಂಗ್ಲೆಂಡ್​​ 207ರನ್​ ಗಳಿಗೆ ಸರ್ವಪತನ ಕಾಣುವುದರೊಂದಿಗೆ ಟೆಸ್ಟ್​​ ಸರಣಿಯನ್ನ 0-4ರಿಂದ ಸೋತಿತ್ತು.

ಏಕದಿನ ಸರಣಿಯಲ್ಲಿ ಅದ್ಭುತ ಆಟವಾಡಿದ ಇಂಗ್ಲೆಂಡ್​​: ಟಿ20ಯಲ್ಲಿ ಮತ್ತೆ ಮುಗ್ಗರಿಸಿದ ಮಾರ್ಗನ್​ ಪಡೆ

ಟೆಸ್ಟ್​​ ಸರಣಿಯ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್​​ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡ್ತು. ಟೀಂ ಇಂಡಿಯಾಗೆ ಟಫ್​ ಫೈಟ್​​ ನೀಡ್ತು. ಆದರೂ ಸಹ ಸರಣಿ ಗೆಲ್ಲಲೂ ಸಾಧ್ಯವಾಗಲಿಲ್ಲ, ಆದರೆ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಮೂಲಕ ತಂಡದಲ್ಲಿ ಎಲ್ಲವೂ ಸರಿಹೋಗಿದೆ ಅನ್ನುವಷ್ಟರಲ್ಲೇ ಟಿ20 ಸರಣಿಯ 2ನೇ ಪಂದ್ಯದಲ್ಲಿ ಮತ್ತೆ ಇಂಗ್ಲೆಂಡ್​​'ನ ಹಳೆ ರಾಗ ಶುರುವಾಯಿತು.

2ನೇ ಟಿ20 ಪಂದ್ಯ: ಮಹತ್ವದ ಸಮಯದಲ್ಲೇ ವಿಕೆಟ್​​ ಒಪ್ಪಿಸಿದ ಇಂಗ್ಲೆಂಡ್​​

ಮೊದಲ ಟಿ20 ಗೆದ್ದು 2ನೇ ಪಂದ್ಯವನ್ನ ಗೆಲ್ಲೂವ ಉತ್ಸಹಾಹದಲಿದ್ದ ಇಂಗ್ಲೆಂಡ್​​ 2ನೇ ಟಿ20 ಪಂದ್ಯದಲ್ಲಿ ಭಾರತವನ್ನ 144ರನ್​ಗಳಿಗೆ ಕಟ್ಟಿಹಾಕಿತ್ತು. 145ರನ್​ಗಳ ಸರಳ ಮೊತ್ತವನ್ನ ಬೆನ್ನತ್ತಿದ್ದ ಇಂಗ್ಲೆಂಡ್​​ ಗೆಲುವಿನ ದಡಕ್ಕೆ ಬಂದು ನಿಂತಿತ್ತು. ಕೊನೆಯ 24 ಎಸೆತಗಳಲ್ಲಿ 32 ರನ್​​ ಅವಶ್ಯಕತೆ ಇದ್ದಾಗ ಜೋಸ್​​​ ಬಟ್ಲರ್ ಹಾಗೂ ಜೊ ರೂಟ್​​ ಔಟಾಗಿ ಇಂಗ್ಲೆಂಡ್​​ ಸರಣಿ ಕನಸಿಗೆ ತಣ್ಣೀರು ಎರಚಿದರು. ​​

3ನೇ ಟಿ20 ಪಂದ್ಯ: 19 ಬಾಲ್​.. 8 ರನ್.. 8 ವಿಕೆಟ್..

ಬೆಂಗಳೂರಿನ 3ನೇ ಹಾಗೂ ಅಂತಿಮ ಪಂದ್ಯವನ್ನ ಭಾರತದ ಕ್ರಿಕೆಟ್​ ಅಭಿಮಾನಿಗಳು ಮರೆಯೋಕೆ ಸಾಧ್ಯವೇ ಇಲ್ಲ. ಟೀಂ ಇಂಡಿಯಾ ಪೇರಿಸಿದ್ದ 203 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್, 13.2 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು.ಆದ್ರೆ 16.3 ಓವರ್​ನಲ್ಲಿ 127 ರನ್​ಗೆ ಆಲೌಟ್​ ಆದ್ರು. 19 ಬಾಲ್​ನಲ್ಲಿ 8 ರನ್​ಗಳ ಅಂತರದಲ್ಲಿ 8 ವಿಕೆಟ್​ಗಳು ಪತನವಾದ್ವು. ಇಂಗ್ಲೆಂಡ್​ ಹೀನಾಯ ಸೋಲು ಅನುವಿಸಿತು.

ಒಟ್ಟಿನಲ್ಲಿ ಇಂಗ್ಲೆಂಡ್​'ಗೆ ಭಾರತದ ಪ್ರವಾಸ ಬಿಸಿ ತುಪ್ಪವಾಗಿದಂತೂ ಸುಳ್ಳಲ್ಲ. ​ತಮ್ಮ ಪ್ರತೀ ಪಂದ್ಯದಲ್ಲೂ ಸಡನ್​ ಕೊಲಾಪ್ಸ್​​​ನಿಂದ ಇಂಗ್ಲೆಂಡ್​​ ಟೂರ್ನಿಯನ್ನ ಕೈಚೆಲ್ಲುವಂತಾಯಿತು. ಏನೇ ಆದರೂ ಇಂಗ್ಲೆಂಡ್​​​ ಬರಿಗೈಯಲ್ಲಿ ತವರಿಗೆ ಮರಳಿದ್ದು ನಿಜಕ್ಕೂ ಅವರದ್ದೇ ವೈಫಲ್ಯ ಕಾರಣ.