Asianet Suvarna News Asianet Suvarna News

IPLನಲ್ಲಿ ಬಿಖರಿಯಾಗದ ಲೆಜೆಂಡ್ ಬೌಲರ್ ಇರ್ಫಾನ್ ಪಠಾಣ್

ಈತ ಟೀಂ ಇಂಡಿಯಾ ಪರ ಟೆಸ್ಟ್​​ ಕ್ರಿಕೆಟ್​​'ನಲ್ಲಿ ಹ್ಯಾಟ್ರಿಕ್​​​ ವಿಕೆಟ್​​ ಪಡೆದ ಗ್ರೇಟ್​​ ಬೌಲರ್​​. ತನ್ನ ಸ್ವಿಂಗ್​ ಬೌಲಿಂಗ್​​ನಿಂದ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಟ ಬ್ಯಾಟ್ಸ್'ಮನ್'ಗಳನ್ನೇ ಮಕಾಡೆ ಮಲಗಿಸಿದ ಲೆಜಂಡರಿ ಬೌಲರ್​​​ ಇಂದು ಯಾರಿಗೂ ಬೇಡವಾಗಿದ್ದಾರೆ. ಇತನ ಡೆಡ್ಲಿ ಬೌಲಿಂಗನ್ನ ಕೇಳುವವರೇ ಇಲ್ಲದಂತಾಗಿದೆ. ಯಾರು ಆ ಮಹಾನ್​​ ಬೌಲರ್​​.? ಏನು ಇವರ ವ್ಯಥೆ.? ಇಲ್ಲಿದೆ ವಿವರ

The Reason Why A Legend Bowler Irfan Pathan Not Saled In IPL Bidding

ಈತ ಟೀಂ ಇಂಡಿಯಾ ಪರ ಟೆಸ್ಟ್​​ ಕ್ರಿಕೆಟ್​​'ನಲ್ಲಿ ಹ್ಯಾಟ್ರಿಕ್​​​ ವಿಕೆಟ್​​ ಪಡೆದ ಗ್ರೇಟ್​​ ಬೌಲರ್​​. ತನ್ನ ಸ್ವಿಂಗ್​ ಬೌಲಿಂಗ್​​ನಿಂದ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಟ ಬ್ಯಾಟ್ಸ್'ಮನ್'ಗಳನ್ನೇ ಮಕಾಡೆ ಮಲಗಿಸಿದ ಲೆಜಂಡರಿ ಬೌಲರ್​​​ ಇಂದು ಯಾರಿಗೂ ಬೇಡವಾಗಿದ್ದಾರೆ. ಇತನ ಡೆಡ್ಲಿ ಬೌಲಿಂಗನ್ನ ಕೇಳುವವರೇ ಇಲ್ಲದಂತಾಗಿದೆ. ಯಾರು ಆ ಮಹಾನ್​​ ಬೌಲರ್​​.? ಏನು ಇವರ ವ್ಯಥೆ.? ಇಲ್ಲಿದೆ ವಿವರ

ಟೆಸ್ಟ್​​​ ಕ್ರಿಕೆಟ್​​​ನ ಹ್ಯಾಟ್ರಿಕ್​​ ಹೀರೋ: ಟೆಸ್ಟ್​​ನಲ್ಲಿ ಹ್ಯಾಟ್ರಿಕ್​​ ಪಡೆದ ಏಕೈಕ ಭಾರತೀಯ

2006 ಪಾಕಿಸ್ತಾನ ವಿರುದ್ಧದ 3ನೇ ಟೆಸ್ಟ್​​'ನಲ್ಲಿ ನಡೆದ ಈ ಮ್ಯಾಜಿಕ್​​​​ ಅನ್ನು ಬಹುಶಃ ಭಾರತಿಯ ಕ್ರಿಕೆಟ್​​ ಪ್ರೇಮಿಗಳು ಇಂದಿಗೂ ಮರೆತೇ ಇಲ್ಲ. ಅಷ್ಟೇ ಅಲ್ಲ ಇನ್ನೂ ಹತ್ತು ಹಲು ವರ್ಷಗಳು ಇರ್ಫಾನ್​​​ ಪಠಾಣ್​​ರ ಈ ಅದ್ಭುತ ಸ್ಪೆಲ್​​ ಅನ್ನು ಮರೆಯಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಅಂದು ಭಾರತದ ಮಹಾನ್​​​ ಬೌಲರ್​​ ಒಬ್ಬ ಭಾರತದ ಬಧ್ಧ ವೈರಿ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್​​ ಪಡೆದು ಎಲ್ಲರ ಉಬ್ಬೇರಿಸುವಂತೆ ಮಾಡಿಬಿಟ್ಟಿದ್ದ.

ಈತನ ಸ್ವಿಂಗ್​​​​ ಬೌಲಿಂಗ್​​ಗೆ ವಿಶ್ವವೇ ಸಲಾಂ: ಸ್ವಿಂಗ್​​ ಮ್ಯಜಿಷಿಯನ್​​​​ ಇರ್ಫಾನ್​​ ಪಠಾಣ್​​​

21ರ ಶತಮಾನದ ಆರಂಭದಲ್ಲಿ ತನ್ನ ಸ್ವಿಂಗ್​ ಬೌಲಿಂಗ್​​ನಿಂದ ಏಲ್ಲರ ಗಮನ ಸೆಳದಿದ್ದ ಇರ್ಫಾನ್​​​ ಪಠಾಣ್​​ ಬೌಲಿಂಗ್​​ಗೆ ವಿಶ್ವವೇ ದಂಗಾಗಿತ್ತು. ಇರ್ಫಾನ್​ರನ್ನ ಸ್ವಿಂಗ್​​​​ ಮೆಜಿಷಿಯನ್​​​​​ ಎಂದೆ ಕರೆಯುತಿದ್ದರು. ಈತ ಬೌಲಿಂಗ್​​​ಗೆ ಇಳಿದ ಅಂದ್ರೆ ಏದುರಾಳಿ ಬ್ಯಾಟ್ಸ್​ಮನ್​ಗಳು ತಲೆಕೆಡಸಿಕೊಳ್ತಿದ್ರು. ಯಾಕಾದ್ರು ಈತ ಬೌಲಿಂಗ್​​ಗೆ ಬಂದನೋ ಅನ್ನುತಿದ್ರು.

IPLನಲ್ಲಿ ಬಿಖರಿಯಾಗದ ಲೆಜೆಂಡ್​​ ಬೌಲರ್​​​: ಸ್ವಿಂಗ್​​ ಮ್ಯಜಿಷಿಯನ್​​​​'ಗೆ ಈ ಗತಿ ಬರಲು ಕಾರಣವೇನು

ಇಂತಹ ಮಹಾನ್​​ ಬೌಲರ್​​​ ಇಂದು ಯಾರಿಗೂ ಬೇಡವಾಗಿದ್ದಾರೆ. ಇತ್ತೀಚೆಗೆ ನಡೆದ 2017ರ ಐಪಿಎಲ್​​​​ ಆಟಗಾರರ ಹರಾಜು ಪ್ರಕ್ರಿಯೇಯಲ್ಲಿ ವಿದೇಶಿ ಬೌಲರ್​ಗಳನ್ನ ಕೋಟಿ ಕೋಟಿ ಕೊಟ್ಟು ಖರೀಸಿಸಿದ IPL ಫ್ರಾಂಚೈಸಿಗಳು ಇರ್ಫಾನ್​​ ಪಠಾಣ್​​'ರಂತಹ ಆಕ್ರಮಣಕಾರಿ ಬೌಲರ್'​​​ಗೆ ಕನಿಷ್ಠ 50 ಲಕ್ಷವನ್ನು ಕೊಡಲು ಮನಸ್ಸು ಮಾಡಲಿಲ್ಲ. ಇದರಿಂದ ಇರ್ಫಾನ್​ ಈ ಬಾರಿ IPL ಆಡುತ್ತಿಲ್ಲ.

ಇರ್ಫಾನ್​​​ ಪಠಾಣ್'​​ರ ಈ ಸ್ಥಿತಿಗೆ ಕಾರಣವೂ ಇದೆ. ಇರ್ಫಾನ್​​​ ಟೀಂ ಇಂಡಿಯಾ ಪ್ರತಿನಿಧಿಸಿ 4 ವರ್ಷಗಳಾಗಿವೆ. 2012ರಲ್ಲಿ ಅಕ್ಟೋಬರ್​​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಪಂದ್ಯವೇ ಇರ್ಫಾನ್​​​'ಗೆ ಕೊನೆ ಪಂದ್ಯವಾಗಿತ್ತು. ಅಂದು ಗಾಯಾಳುವಾಗಿ ಹೊರಬಿದ್ದ ಬರೋಡಾ ಎಕ್ಸ್​​ಪ್ರೆಸ್​​​ ಇಂದಿಗೂ ಟೀಂ ಇಂಡಿಯಾದ ಕದವನ್ನ ತಟ್ಟುತ್ತಲೇ ಇದ್ದಾರೆ.

ಸತತವಾಗಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಠಾಣ್​​ ಇನ್ನೇನು ಟೀಂ ಇಂಡಿಯಾಗೆ ಮತ್ತೆ ಸೆಲೆಕ್ಟ್​​​ ಆಗ್ತೀನಿ ಅನ್ನುವಾಗ್ಲೆ ಗಾಯಾಳುವಾಗಿಬಿಡುತಿದ್ದರು. ಇದು ಅವರ ಕಮ್​ಬ್ಯಾಕ್​ ಕನಸ್ಸನ್ನ ಕನಸಾಗೇ ಉಳಿಸುತಿತ್ತು. ಇನ್ನೂ ಕಳೆದ ಬಾರಿ ಪುಣೆ ವಿರುದ್ಧ ಆಡಿದ್ದ ಇರ್ಫಾನ್​​ ಗಾಯದ ಸಮಸ್ಯೆಯಿಂದ ಕೇವಲ 2 ಪಂದ್ಯದಲ್ಲಿ ಮಾತ್ರ ಆಡಲು ಸಾಧ್ಯವಾಗಿತ್ತು. ಇಂದೂ ಅಷ್ಟೇ ಎಲ್ಲಾ ಫ್ರಾಂಚೈಸಿಗಳು ಇರ್ಫಾನ್​​​ರನ್ನ ಬಿಡಲು ಕೊಡುತ್ತಿರುವ ಕಾರಣನೇ ಅವರು ಸದಾ ಗಾಯಾಳುವಾಗ್ತಾರೆ ಎಂಬುದು.

ಏನೇ ಆದ್ರೂ ಭಾರತ ಕಂಡ ಅದ್ಭುತ ವೇಗಿಗೆ ಹೀಗಾಗಬಾರದಿತ್ತು. ಆದರೆ ಕಾಲ ಇನ್ನೂ ಮಿಂಚಿಲ್ಲ. ಇರ್ಫಾನ್​​ ಇದನ್ನೇ ಚಾಲೆಂಜಾಗಿ ಸ್ವೀಕರಿಸಿದಂತಿದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅದ್ಭುತ ಸಾಧನೆ ಮಾಡಲಿ ಮತ್ತೆ ಟೀಂ ಇಂಡಿಯಾಗೆ ಕಮ್​ಬ್ಯಾಕ್​ ಮಾಡಲಿ ಎಂಬುದೆ ಅವರ ಅಭಿಮಾನಿಗಳ ಆಶಯ.

 

Follow Us:
Download App:
  • android
  • ios