Asianet Suvarna News Asianet Suvarna News

ಸಿಂಗಾಪುರ ವಿರುದ್ಧ ಭಾರತದ ವಿಕಲಚೇತನರ ಕ್ರಿಕೆಟ್ ತಂಡಕ್ಕೆ ಸರಣಿ ಗೆಲುವು

ಸಿಂಗಾಪುರದಲ್ಲಿ ನಡೆದ ಅಲನ್ ಬಾರ್ಡರ್ ವಿಕಲಚೇತನರ ಕ್ರಿಕೆಟ್ ಸರಣಿಯಲ್ಲಿ ಭಾರತ ಪ್ರಶಸ್ತಿ ಗೆದ್ದಿದೆ. ಸಿಂಗಾಪುರ ಕ್ರಿಕೆಟ್ ತಂಡದ ವಿರುದ್ಧ ನಡೆದ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
 

The Physically Disabled Indian Cricket Team tour of Singapore  sees success with a 2-1 win.

ಸಿಂಗಾಪುರ(ಜೂನ್.4) ಸಿಂಗಾಪುರ ತಂಡದ ವಿರುದ್ಧ ನಡೆದ ಅಲನ್ ಬಾರ್ಡರ್ ಕ್ರಿಕೆಟ್ ಸರಣಿಯಲ್ಲಿ ಭಾರತದ ವಿಕಲಚೇತನರ ತಂಡ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಸಿಂಗಾಪುರದಲ್ಲಿ ಆಯೋಜಿಸಲಾಗಿದ್ದ 3 ದಿನಗಳ ದ್ವಿಪಕ್ಷೀಯ ಅಲನ್ ಬಾರ್ಡರ್ ವಿಕಲಚೇತನರ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಂಗಾಪೂರ್ 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. 154 ರನ್ ಗುರಿ ಬೆನ್ನಟ್ಟಿದ ಭಾರತ, 19.1 ಓವರ್‌ನಲ್ಲಿ 156 ರನ್ ಸಿಡಿಸಿ ಗೆಲುವು ಸಾಧಿಸಿತು.

The Physically Disabled Indian Cricket Team tour of Singapore  sees success with a 2-1 win.

ದ್ವಿತೀಯ ದಿನದ ಪಂದ್ಯದಲ್ಲಿ ಸಿಂಗಾಪರು 25 ಓವರ್‌ಗಳಲ್ಲಿ 175 ರನ್ ಸಿಡಿಸಿತು. ಈ ಗುರಿಯನ್ನ ಚೇಸ್ ಮಾಡಿದ ಭಾರತ 21.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸರಣಿ ಗೆದ್ದ ಭಾರತ ತಂಡ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್‌ಗಳಲ್ಲಿ 154 ರನ್ ಸಿಡಿಸಿತು. ಆದರೆ ಸಿಂಗಾಪುರ ತಂಡ 19.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಆದರೆ  2 ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ 2-1 ಅಂತರದಲ್ಲಿ ಅಲನ್ ಬಾರ್ಡರ್ ಪ್ರಶಸ್ತಿ ವಶಪಡಿಸಿಕೊಂಡಿತು.

The Physically Disabled Indian Cricket Team tour of Singapore  sees success with a 2-1 win.

Follow Us:
Download App:
  • android
  • ios