ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಏಕೈಕ ಐಪಿಎಲ್ ಪ್ರಾಂಚೈಸಿ ಎನ್ನುವ ಕೀರ್ತಿಗೆ ಆರ್'ಸಿಬಿ ಪಾತ್ರವಾಗಿದೆ.
ಬೆಂಗಳೂರು(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ 2011ರಿಂದಲೂ ಒಂದು ಪಂದ್ಯದಲ್ಲಿ ಹಸಿರು ಜರ್ಸಿ ತೊಟ್ಟು ಮೈದಾನಕ್ಕಿಳಿಯುತ್ತಿದೆ.
ಆರ್'ಸಿಬಿ ಪ್ರಾಂಚೈಸಿಯು 'ಗೋ ಗ್ರೀನ್' ಘೋಷಣೆಯಡಿ ಜಾಗತಿಕ ತಾಪಮಾನದ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇದಷ್ಟೇ ಅಲ್ಲದೇ ಆರ್'ಸಿಬಿ ಪ್ರಾಂಚೈಸಿಯು ಸ್ವಯಂ ಪ್ರೇರಿತವಾಗಿ ಗಿಡ ನೆಡುವ ಮೂಲಕ, ಮಾಲಿನ್ಯ ತಡೆಗಟ್ಟುವ, ಇಂಧನ ಉಳಿಸುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಏಕೈಕ ಐಪಿಎಲ್ ಪ್ರಾಂಚೈಸಿ ಎನ್ನುವ ಕೀರ್ತಿಗೆ ಆರ್'ಸಿಬಿ ಪಾತ್ರವಾಗಿದೆ.
ಕಳೆದ ವರ್ಷವಂತೂ ಆರ್'ಸಿಬಿ ತಂಡ ಸೈಕಲ್ ಮೂಲಕ ಸ್ಟೇಡಿಯಂಗೆ ಬಂದರೆ, ಅಭಿಮಾನಿಗಳಿಗೆ ಆಟೋ ರಿಕ್ಷಾದ ಮೂಲಕ ಬರುವ ವ್ಯವಸ್ಥೆ ಮಾಡಲಾಗಿತ್ತು.
ಆರ್'ಸಿಬಿ ಈ ಗ್ರೀನ್ ಜರ್ಸಿ ತಯಾರಾಗೋದು ಹೇಗೆ..? ಅದರ ಉದ್ದೇಶವೇನೆಂದು ನೀವೇ ಒಮ್ಮೆ ನೋಡಿ

