ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನಕ್ಕೆ ಕಾರಣ ಏನು ಗೊತ್ತಾ..? ಅವರ ಪತ್ನಿ ಮತ್ತು ಮನೆ. ಹೌದು, ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಮದ್ವೆಯಾದ ಬಳಿಕ ಕಾರ್ತಿಕ್ ಅದೃಷ್ಟ ಬದಲಾಗಿದೆ. ಈಗ ಹೊಸ ಮನೆಯಿಂದ ಹೊಸ ಯೋಗ ಶುರುವಾಗಿದೆ. ಹಾಗಾದರೆ ಕಾರ್ತಿಕ್-ದೀಪಿಕಾ ಹೊಸ ಮನೆ ಹೇಗಿದೆ? ಇಲ್ಲಿದೆ ವಿವರ

ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನಕ್ಕೆ ಕಾರಣ ಏನು ಗೊತ್ತಾ..? ಅವರ ಪತ್ನಿ ಮತ್ತು ಮನೆ. ಹೌದು, ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಮದ್ವೆಯಾದ ಬಳಿಕ ಕಾರ್ತಿಕ್ ಅದೃಷ್ಟ ಬದಲಾಗಿದೆ. ಈಗ ಹೊಸ ಮನೆಯಿಂದ ಹೊಸ ಯೋಗ ಶುರುವಾಗಿದೆ. ಹಾಗಾದರೆ ಕಾರ್ತಿಕ್-ದೀಪಿಕಾ ಹೊಸ ಮನೆ ಹೇಗಿದೆ? ಇಲ್ಲಿದೆ ವಿವರ

ಕಾರ್ತಿಕ್ ಆಟಕ್ಕೆ ಮನೆಯೇ ಸ್ಫೂರ್ತಿ

ದಿನೇಶ್ ಕಾರ್ತಿಕ್ ಈ ವರ್ಷ ಡಬಲ್ ಸಂಭ್ರಮದಲ್ಲಿದ್ದಾರೆ. ಹೊಸ ಮನೆಗೆ ಪ್ರವೇಶಿಸಿದ್ದಾರೆ. ಹೊಸ ಮನೆಗೆ ಹೋಗಿದ್ದೇ ಬಂತು ಅವರ ಅದೃಷ್ಟ ಸಹ ಬದಲಾಗಿ ಹೋಗಿದೆ. ಈ ವರ್ಷ ಅವರ ಅದ್ಭುತ ಪ್ರದರ್ಶನಕ್ಕೆ ಅವರ ಮನೆ ಕಾರಣ. ಅವರ ಮನೆಯನ್ನೊಮ್ಮೆ ನೋಡಿದರೆ ಎಷ್ಟು ಸುಂದರವಾಗಿದೆ ಅಂತ ನೀವೂ ಉಬ್ಬೇರಿಸ್ತೀರಾ. ಈ ಮನೆಯೇ ಕಾರ್ತಿಕ್ಗೆ ಸ್ಫೂರ್ತಿಯಂತೆ.

ಕಾರ್ತಿಕ್-ದೀಪಿಕಾ ಕನಸಿನ ಕೂಸು

ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಮದ್ವೆಯಾದ ಬಳಿಕ ಕಾರ್ತಿಕ್ ಈ ಹೊಸ ಮನೆ ಕಟ್ಟಿಸಿದ್ದಾರೆ. ಇವರಿಬ್ಬರ ಕನಸಿನ ಕೂಸು ಈ ಮನೆ. ಇಬ್ಬರ ಇಚ್ಚೆ ಅಭಿಪ್ರಾಯದಂತೆ ಈ ಮನೆ ಮೂಡಿ ಬಂದಿದೆ. ಮನೆಯ ಲಾಂಚ್ನಲ್ಲಿ ದೀಪಿಕಾ ಹೆಚ್ಚಾಗಿ ಕಾಲ ಕಳೆಯುತ್ತಾರೆ ಅಂತೆ. ಅಲ್ಲಿ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನ ಹಿಡಲಾಗಿದೆ. ಕಾರ್ತಿಕ್ ಎಷ್ಟೋ ಸಲ ಇಲ್ಲಿಯೇ ಮಲಗಿದ್ದಾರಂತೆ.

ದೀಪಿಕಾ ಕನಸಿನಂತಿದೆ ಬೆಡ್ರೂಮ್

ಒಬ್ಬ ಕ್ರೀಡಾಪಟು ತನ್ನ ಕಿಟ್ ಅನ್ನ ಎಷ್ಟು ಪ್ರೀತಿಸುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತು. ಅವನನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೆ ತಮ್ಮ ಸ್ಪೋರ್ಟ್ಸ್ ಕಿಟ್'ನ್ನೂಅನ್ನೂ ನೋಡಿಕೊಳ್ತಾನೆ. ಕಾರ್ತಿಕ್ ಮತ್ತು ದೀಪಿಕಾ ಇಬ್ಬರೂ ಕ್ರೀಡಾಪಟುಗಳಾಗಿರುವುದರಿಂದ ಅವರಿಬ್ಬರ ಕಿಟ್ ಇಡೋದಿಕ್ಕೆ ಪ್ರತ್ಯೇಕ ಸ್ಥಳ ಮಾಡಿದ್ದಾರೆ. ಇವರಿಬ್ಬರ ಈ ಕನಸಿನ ಕೂಸು ರಜನಿಕಾಂತ್ ಮನೆ ಪಕ್ಕದಲ್ಲೇ ಕಾರ್ತಿಕ್-ದೀಪಿಕಾ ಹೊಸ ಮನೆ ಇರೋದು. ತಲೈವಾ ಮನೆ ಪಕ್ಕದಲ್ಲಿ ಇರೋದಕ್ಕೆ ಇವರಿಬ್ಬರಿಗೆ ಇನ್ನಿಲ್ಲದ ಖುಷಿಯಂತೆ.

ಈ ಮನೆಗೆ ಬಂದ್ಮೇಲೆ ಇಬ್ಬರ ಅದೃಷ್ಟ ಬದಲಾಗಿದೆ. ತಮ್ಮ ವೃತ್ತಿ ಬದುಕಿನಲ್ಲಿ ಮತ್ತೆ ಯಶಸ್ಸು ಕಾಣ್ತಿದ್ದಾರೆ. ದೀಪಿಕಾ ಪಲ್ಲಿಕಲ್ ಇನ್ನಷ್ಟು ಪ್ರಶಸ್ತಿಗಳನ್ನ ಗೆಲ್ಲಲಿ, ದಿನೇಶ್ ಕಾರ್ತಿಕ್ ಆದಷ್ಟು ಬೇಗ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಲಿ ಅನ್ನೋದೇ ಅವರಿಬ್ಬರ ಅಭಿಮಾನಿಗಳ ಆಶಯ.