Asianet Suvarna News Asianet Suvarna News

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಸಾತ್ವಿಕ್‌-ಚಿರಾಗ್‌

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ, ಶ್ರೀಕಾಂತ್ ಸೇರಿದಂತೆ ತಾರಾ ಪಟುಗಳು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಯುವ ಬ್ಯಾಡ್ಮಿಂಟನ್ ಪಟುಗಳು ಭರವಸೆ ಮೂಡಿಸಿದ್ದಾರೆ.

thailand open badminton 2019 Satwik and Chirag enterd semifinal
Author
Bengaluru, First Published Aug 3, 2019, 3:34 PM IST
  • Facebook
  • Twitter
  • Whatsapp

ಬ್ಯಾಂಕಾಕ್‌(ಆ.03): ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕೊರಿಯಾದ ಚೊಯಿ ಸೊಲ್ಗ್‌ಯ ಹಾಗೂ ಸಿಯೊ ಸ್ಯುಂಗ್‌ ವಿರುದ್ಧ 21-17, 17-21, 21-19 ಗೇಮ್‌ಗಳಲ್ಲಿ ಭಾರತೀಯ ಜೋಡಿ ಗೆಲುವು ಸಾಧಿಸಿತು. ಕೊರಿಯನ್‌ ಜೋಡಿ ವಿರುದ್ಧ ಸಾತ್ವಿಕ್‌-ಚಿರಾಗ್‌ಗಿದು ಮೊದಲ ಜಯ. ಶನಿವಾರ ನಡೆಯಲಿರುವ ಸೆಮೀಸ್‌ನಲ್ಲಿ ಭಾರತೀಯ ಜೋಡಿ, ಕೊರಿಯಾದ ಸುಂಗ್‌ ಹ್ಯುನ್‌ ಹಾಗೂ ಶಿನ್‌ ಬೆಕ್‌ ಜೋಡಿ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: ಥಾಯ್ಲೆಂಡ್‌ ಓಪನ್‌ : ಸೈನಾ, ಶ್ರೀಕಾಂತ್‌ಗೆ ಆಘಾತ

ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಬಿ.ಸಾಯಿ ಪ್ರಣೀತ್‌, 7ನೇ ಶ್ರೇಯಾಂಕಿತ ಜಪಾನ್‌ನ ಕಂಟಾ ತ್ಸುನೆಯಾಮ ವಿರುದ್ಧ 18-21, 12-21 ಗೇಮ್‌ಗಳಲ್ಲಿ ಸೋಲುಂಡು ಹೊರಬಿದ್ದರು. ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್‌-ಅಶ್ವಿನಿ ಪೊನ್ನಪ್ಪ ಜೋಡಿ ಜಪಾನ್‌ನ ಯುಟಾ ವಟನಾಬೆ-ಹಿಗಶಿನೊ ವಿರುದ್ಧ 13-21, 15-21 ಗೇಮ್‌ಗಳಲ್ಲಿ ಪರಾಭವಗೊಂಡಿತು.

Follow Us:
Download App:
  • android
  • ios