ಮ್ಯಾಕ್ಸ್'ವೆಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಮೊಹಾಲಿ(ಮೇ.10): ಐಪಿಎಲ್ ಪ್ಲೇ ಆಫ್ ಕನಸು ಜೀವಂತವಾಗಿಟ್ಟುವಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಯಶಸ್ವಿಯಾಗಿದೆ. ಕೋಲ್ಕತ ನೈಟ್'ರೈಡರ್ಸ್ ಎದುರು 14 ರನ್'ಗಳ ರೋಚಕ ಜಯ ಸಾಧಿಸುವ ಮೂಲಕ ಮ್ಯಾಕ್ಸ್'ವೆಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಸ್ಥಾನ ಖಚಿತ ಪಡಿಸಿಕೊಂಡಿದ್ದು ಉಳಿದ ಮೂರು ಸ್ಥಾನಗಳಿಗೆ ಕೆಕೆಆರ್,ಪುಣೆ, ಹೈದರಾಬಾದ್ ಹಾಗೂ ಪಂಜಾಬ್ ತಂಡಗಳ ನಡುವೆ ಸ್ಪರ್ಧೆ ಎದುರಾಗಿದೆ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 167 ರನ್ ಗಳಿಸಿತು. ಆನಂತರ ಸ್ಪಿನ್ನರ್ಸ್‌ ಹಾಗೂ ವೇಗಿಗಳು ಕರಾರುವಕ್ಕಾದ ದಾಳಿಯ ನೆರವಿವಿಂದ ಕೋಲ್ಕತಾವನ್ನು 153 ರನ್‌'ಗಳಿಗೆ ಕಟ್ಟಿಹಾಕುವಲ್ಲಿ ಕಿಂಗ್ಸ್ ಇಲೆವೆನ್ ಯಶಸ್ವಿಯಾಯಿತು.