Asianet Suvarna News Asianet Suvarna News

25 ವರ್ಷಗಳ ಬಳಿಕ ATP ರ‍್ಯಾಂಕಿಂಗ್‌ನಿಂದ ರೋಜರ್ ಫೆಡರರ್ ಔಟ್..!

* ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ಬಿಗ್‌ ಶಾಕ್
* 25 ವರ್ಷಗಳ ಬಳಿಕ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 1000ದಿಂದ ಹೊರಗುಳಿದ ಫೆಡರರ್
* ಫೆಡರರ್‌ 2004ರಲ್ಲಿ ಮೊದಲ ಬಾರಿ ವಿಶ್ವ ನಂ.1 ಸ್ಥಾನ ಪಡೆದಿದ್ದರು

Tennis Legend Roger Federer un ranked for 1st time in 25 Year kvn
Author
Bengaluru, First Published Jul 12, 2022, 10:08 AM IST

ಲಂಡನ್(ಜು.12)‌: 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ರೋಜರ್‌ ಫೆಡರರ್‌ 25 ವರ್ಷಗಳ ಬಳಿಕ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 1000ದಿಂದ ಹೊರಗುಳಿದಿದ್ದಾರೆ. 1997ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟಿದ್ದ ರೋಜರ್ ಫೆಡರರ್ ಬಳಿಕ ಪ್ರತೀ ವಾರವೂ ಪ್ರಕಟಗೊಳ್ಳುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಸದ್ಯ ದೀರ್ಘ ಸಮಯದಿಂದ ಗಾಯದಿಂದ ಬಳಲುತ್ತಿರುವ ಕಾರಣ ವರ್ಷಕ್ಕೂ ಹೆಚ್ಚು ಸಮಯದಿಂದ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದು, ಇನ್ನಷ್ಟೇ ಗಾಯದಿಂದ ಚೇತರಿಸಿಕೊಳ್ಳಬೇಕಿದೆ. ರೋಜರ್ ಫೆಡರರ್‌ 2004ರಲ್ಲಿ ಮೊದಲ ಬಾರಿ ವಿಶ್ವ ನಂ.1 ಸ್ಥಾನ ಪಡೆದಿದ್ದರು. ಅಲ್ಲದೇ ಸತತ 237 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ಸಾಧನೆಯನ್ನೂ ಮಾಡಿದ್ದರು.

ವಿಂಬಲ್ಡನ್‌ ಗೆದ್ರೂ ರ‍್ಯಾಂಕಿಂಗ್‌ನಲ್ಲಿ ಮೇಲೇರದ ಜೋಕೋವಿಚ್, ರಬೈಕೆನಾ..!

ಉಕ್ರೇನ್‌ ಮೇಲಿನ ಯುದ್ಧದ ಕಾರಣ ರಷ್ಯಾ ಹಾಗೂ ಬೆಲಾರಸ್‌ ಟೆನಿಸಿಗರಿಗೆ ಟೂರ್ನಿಗೆ ನಿಷೇಧ ಹೇರಿದ ವಿಂಬಲ್ಡನ್‌ ಕ್ರಮ ಈಗ ಚಾಂಪಿಯನ್‌ ಟೆನಿಸಿಗರಿಗೆ ಮುಳುವಾಗಿ ಪರಿಣಮಿಸಿದೆ. ಈ ಬಾರಿ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಕಜಕಸ್ತಾನದ ಎಲೈನಾ ರಬೈಕೆನಾ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದರೂ ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಯಾವುದೇ ಅಂಕಗಳನ್ನು ಪಡೆದಿಲ್ಲ. ಇದಕ್ಕೆ ಕಾರಣ ಕ್ರಮವಾಗಿ ವಿಶ್ವ ಪುರುಷ ಹಾಗೂ ಮಹಿಳಾ ಟೆನಿಸಿಗರ ಸಂಸ್ಥೆಗಳಾದ ಎಟಿಪಿ ಹಾಗೂ ಡಬ್ಲ್ಯುಟಿಎ ಈ ವರ್ಷ ವಿಂಬಲ್ಡನ್‌ ಟೂರ್ನಿಯ ಅಂಕಗಳನ್ನು ಪರಿಗಣಿಸಲು ನಿರ್ಧರಿಸಿದ್ದು. ರಷ್ಯಾ, ಬೆಲಾರಸ್‌ ಟೆನಿಸಿಗರಿಗೆ ಟೂರ್ನಿಯಲ್ಲಿ ಅವಕಾಶ ನೀಡದ್ದಕ್ಕೆ ಎಟಿಪಿ ಹಾಗೂ ಡಬ್ಲ್ಯುಟಿಎ ವಿಂಬಲ್ಡನ್‌ ಟೂರ್ನಿಯಲ್ಲಿ ಆಟಗಾರರು ಗಳಿಸುವ ಅಂಕಗಳನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಲ್ಲ ಎಂದಿತ್ತು. ಆದರೆ ಈ ನಿರ್ಧಾರ ಸದ್ಯ ಟೆನಿಸ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಟೀಕೆ ವ್ಯಕ್ತವಾಗುತ್ತಿದೆ. ರ‍್ಯಾಂಕಿಂಗ್‌ಗೆ 52 ವಾರಗಳ ಅಂಕಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ 2021ರ ವಿಂಬಲ್ಡನ್‌ನಲ್ಲಿ ಗಳಿಸಿದ್ದ ಅಂಕಗಳು ಈಗ ಪರಿಗಣನೆಗೆ ಬರುವುದಿಲ್ಲ.

ಸತತ 4ನೇ ಬಾರಿ ವಿಂಬಲ್ಡನ್‌ ಚಾಂಪಿಯನ್‌ ಆದ ಜೋಕೋ ಟೂರ್ನಿ ಬಳಿಕ 2000 ಅಂಕಗಳನ್ನು ಗಳಿಸಬೇಕಿತ್ತು. ಆದರೆ 3ನೇ ಸ್ಥಾನದಲ್ಲಿದ್ದ ಜೋಕೋವಿಚ್, ಪರಿಷ್ಕೃತ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ರನ್ನರ್‌-ಅಪ್‌ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ 1200 ಅಂಕಗಳನ್ನು ಕಳೆದುಕೊಂಡಿದ್ದು, 45ನೇ ಸ್ಥಾನದಲ್ಲಿದ್ದಾರೆ. ಆದರೆ ನಿಷೇಧದಿಂದಾಗಿ ಟೂರ್ನಿ ತಪ್ಪಿಸಿಕೊಂಡಿದ್ದ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ನಂ.1 ಸ್ಥಾನದಲ್ಲೇ ಮುಂದುವರಿಸಿದ್ದಾರೆ. ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ರಬೈಕೆನಾ ಕೂಡಾ 2000 ಅಂಕಗಳನ್ನು ತಪ್ಪಿಸಿಕೊಂಡಿದ್ದು, 23ನೇ ಸ್ಥಾನದಲ್ಲೇ ಬಾಕಿಯಾಗಿದ್ದಾರೆ. ಹಾಲಿ ಪ್ರೆಂಚ್‌ ಓಪನ್‌ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

ನಿಕ್‌ ಕಿರಿಯೋಸ್‌ ಮಣಿಸಿ 7ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ನೋವಾಕ್ ಜೋಕೋವಿಚ್!

ಇನ್ನು ಕಳೆದ ವರ್ಷ ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌, ಬ್ರಿಟನ್‌ನ ಎಮ್ಮಾ ರಾಡುಕಾನು ಮೊದಲ ಬಾರಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವಾರ ಕೊನೆಗೊಂಡ ವಿಂಬಲ್ಡನ್‌ ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರೂ ರಾರ‍ಯಂಕಿಂಗ್‌ನಲ್ಲಿ 10ನೇ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios