Asianet Suvarna News Asianet Suvarna News

ವಿಂಬ್ಡಲನ್‌ ಗ್ರ್ಯಾಂಡ್‌ಸ್ಲಾಂ ಆರಂಭ: ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ಫೆಡರರ್

113ನೇ ಆವೃತ್ತಿಯ ವಿಂಬಲ್ಡನ್ ಟೂರ್ನಿಗೆ ಇಂದು ಚಾಲನೆ ದೊರಕಲಿದ್ದು, ಎರಡನೇ ಶ್ರೇಯಾಂಕಿತ ರೋಜರ್ ಫೆಡರರ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Tennis Legend Federer Chasing Historic 100th Win At Wimbledon
Author
London, First Published Jul 1, 2019, 10:10 AM IST

ಲಂಡನ್‌[ಜು.01]: 133ನೇ ಆವೃತ್ತಿಯ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಗೆ ಸೋಮವಾರ ಚಾಲನೆ ಸಿಗಲಿದೆ. ರೋಜರ್‌ ಫೆಡರರ್‌, ನೋವಾಕ್‌ ಜೋಕೋವಿಚ್‌, ರಾಫೆಲ್‌ ನಡಾಲ್‌ ನಡುವೆ ಮತ್ತೊಂದು ಸುತ್ತಿನ ಪೈಪೋಟಿ ನಡೆಯಲಿದೆ. 

ವಿಂಬಲ್ಡನ್: ಆ್ಯಂಡರ್’ಸನ್ ಮಣಿಸಿದ ಜೋಕೋ ವಿಂಬಲ್ಡನ್ ಚಾಂಪಿಯನ್

ವಿಶ್ವ ನಂ.1 ಜೋಕೋವಿಚ್‌ ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಆಗಿದ್ದು, ಇಲ್ಲಿ 5ನೇ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ. 2ನೇ ಶ್ರೇಯಾಂಕ ಪಡೆದಿರುವ ಫೆಡರರ್‌, 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಪ್ರಶಸ್ತಿ ಗೆದ್ದರೆ ಈ ಸಾಧನೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಜತೆಗೆ ಒಂದೇ ಗ್ರ್ಯಾಂಡ್‌ಸ್ಲಾಂನಲ್ಲಿ 100 ಗೆಲುವು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲು ಫೆಡರರ್‌ಗೆ ಕೇವಲ 5 ಗೆಲುವುಗಳ ಅಗತ್ಯವಿದೆ. ಇನ್ನು ಕಳೆದ ತಿಂಗಳಷ್ಟೇ ದಾಖಲೆಯ 12ನೇ ಫ್ರೆಂಚ್‌ ಓಪನ್‌ ಗೆದ್ದ ನಡಾಲ್‌ ಹುಲ್ಲಿನಂಕಣದಲ್ಲೂ ಪ್ರಾಬಲ್ಯ ಮೆರೆಯಲು ಕಾತರಿಸುತ್ತಿದ್ದಾರೆ.

ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡ 15ರ ಬಾಲಕಿ !

2 ವಾರಗಳ ಕಾಲ ನಡೆಯಲಿರುವ ಟೂರ್ನಿಯ ಫೈನಲ್‌ ಜು.14ರಂದು ನಿಗದಿಯಾಗಿದೆ. ಅಂದೇ ಏಕದಿನ ವಿಶ್ವಕಪ್‌ನ ಫೈನಲ್‌ ಸಹ ಇರುವುದರಿಂದ ಕ್ರೀಡಾಭಿಮಾನಿಗಳ ಪಾಲಿಗೆ ಸೂಪರ್‌ ಸಂಡೇ ಎನಿಸಲಿದೆ.

ಯುವ ಆಟಗಾರರಾದ ಅಲೆಕ್ಸಾಂಡರ್‌ ಜ್ವೆರೆವ್‌, ಸ್ಟೆಫಾನೋ ಟಿಟ್ಸಿಪಾಸ್‌, ಡೊಮಿನಿಕ್‌ ಥೀಮ್‌ರಿಂದ ಅಚ್ಚರಿಯ ಫಲಿತಾಂಶಗಳನ್ನು ನಿರೀಕ್ಷೆ ಮಾಡಲಾಗಿದೆ. ಕಳೆದ ವರ್ಷದ ರನ್ನರ್‌-ಅಪ್‌ ಕೆವಿನ್‌ ಆ್ಯಂಡರ್‌ಸನ್‌, ಜಪಾನ್‌ನ ಕೇ ನಿಶಿಕೋರಿ ಸಹ ಸ್ಪರ್ಧೆಯಲ್ಲಿದ್ದಾರೆ.

ಪ್ರಜ್ನೇಶ್‌ಗೆ ಕಠಿಣ ಗುರಿ: ಸಿಂಗಲ್ಸ್‌ ವಿಭಾಗದಲ್ಲಿ ಪ್ರಧಾನ ಸುತ್ತಿಗೇರಿರುವ ಭಾರತದ ಪ್ರಜ್ನೇಶ್‌ ಗುಣೇಶ್ವರನ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. 15ನೇ ಶ್ರೇಯಾಂಕಿತ, ಕೆನಡಾದ ಮಿಲೋಸ್‌ ರವೊನಿಚ್‌ ವಿರುದ್ಧ ಪ್ರಜ್ನೇಶ್‌ ಸೆಣಸಲಿದ್ದಾರೆ.

ಸೆರೆನಾಗೆ ಒಲಿಯುತ್ತಾ ಪ್ರಶಸ್ತಿ?: ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲಲು ಹೋರಾಟ ನಡೆಸುತ್ತಿರುವ ಮಾಜಿ ನಂ.1 ಸೆರೆನಾ ವಿಲಿಯಮ್ಸ್‌, ಈ ಬಾರಿ ವಿಂಬಲ್ಡನ್‌ನಲ್ಲಿ ತಮ್ಮ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಫ್ರೆಂಚ್‌ ಓಪನ್‌ ಚಾಂಪಿಯನ್‌, ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಹಾಲಿ ಚಾಂಪಿಯನ್‌ ಜರ್ಮನಿಯ ಆ್ಯಂಜಿಲಿಕ್‌ ಕೆರ್ಬರ್‌, ಮಾಜಿ ನಂ.1 ಸಿಮೋನಾ ಹಾಲೆಪ್‌ ಸಹ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.

ಡಬಲ್ಸ್‌ನಲ್ಲಿ ಭಾರತದ ಐವರು ಆಟಗಾರರು

ಪುರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ, ಜೀವನ್‌ ನೆಡುಚೆಳಿಯನ್‌, ಪೂರವ್‌ ರಾಜಾ ಹಾಗೂ ದಿವಿಜ್‌ ಶರಣ್‌ ಕಣಕ್ಕಿಳಿಯಲಿದ್ದಾರೆ. ಜೀವನ್‌ ಹಾಗೂ ಪೂರವ್‌ ಒಟ್ಟಿಗೆ ಆಡಲಿದ್ದು, ಇನ್ನುಳಿದ ಮೂವರು ವಿದೇಶಿ ಜತೆಗಾರರ ಜತೆ ಆಡಲಿದ್ದಾರೆ.

20 ಕೋಟಿ ರುಪಾಯಿ ಬಹುಮಾನ:

ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗುವ ಆಟಗಾರ/ಆಟಗಾರ್ತಿಗೆ ತಲಾ 20.57 ಕೋಟಿ ಬಹುಮಾನ ಮೊತ್ತ ಸಿಗಲಿದೆ.

01 ಬಾರಿ

ಇದೇ ಮೊದಲ ಬಾರಿಗೆ ವಿಂಬಲ್ಡನ್‌ನ ಅಂತಿಮ ಸೆಟ್‌ನಲ್ಲಿ ಟೈ ಬ್ರೇಕರ್‌ ಅಳವಡಿಸಲಾಗಿದೆ.

Follow Us:
Download App:
  • android
  • ios