ಏಕದಿನ ಕ್ರಿಕೆಟ್‌ನಲ್ಲಿ ಮೊದಲ 300+ ಮೊತ್ತ ದಾಖಲಿಸಿದ ಹೆಗ್ಗಳಿಕೆಗೆ ಇಂಗ್ಲೆಂಡ್ ತಂಡ ಪಾತ್ರವಾಗಿದೆ. ಆದರೆ ಗರಿಷ್ಠ ಭಾರಿ 300ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದ ಸಾಧನೆಗೆ ಪಾತ್ರವಾದ ತಂಡ ಯಾವುದು? ಇಲ್ಲಿದೆ ಫುಲ್ ಡಿಟೇಲ್ಸ್.

ಬೆಂಗಳೂರು(ಜು.11): ಆಧುನಿಕ ಕ್ರಿಕೆಟ್‌ನಲ್ಲಿ 300 ರನ್ ಬಾರಿಸುವುದು ಹಾಗೂ ಅದನ್ನ ಚೇಸ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಏಕದಿನ ಕ್ರಿಕೆಟ್‌ನಲ್ಲಿ ಹಲವು ತಂಡಗಳು 300 ಕ್ಕಿಂತ ಹೆಚ್ಚಿನ ಸ್ಕೋರ್ ದಾಖಲಿಸಿದೆ. ಈ ಸಾಧನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ.

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 300ಕ್ಕಿಂತ ಹೆಚ್ಚು ರನ್ ಸಿಡಿಸಿದ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. 1975 ರಲ್ಲಿ ಭಾರತ ವಿರುದ್ಧ 334 ರನ್ ಸಿಡಿಸಿತ್ತು. ಟೀಂ ಇಂಡಿಯಾ ಮೊದಲು 300ಕ್ಕಿಂತ ಹೆಚ್ಚಿನ ಸ್ಕೋರ್ ದಾಖಲಿಸಿದ್ದು 1996ರಲ್ಲಿ. ವಿಶೇಷ ಅಂದರೆ ಭಾರತ, ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿತ್ತು.

ಗರಿಷ್ಠ ಭಾರಿ 300 ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತ 1996ರಿಂದ ಇಲ್ಲೀವರೆಗೆ ಏಕದಿನ ಕ್ರಿಕೆಟ್‌ನಲ್ಲಿ 101 ಬಾರಿ 300ಕ್ಕಿಂತ ಹೆಚ್ಚಿನ ರನ್ ಸಿಡಿಸಿದೆ. ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 99 ಬಾರಿ 300ಕ್ಕಿಂತ ಹೆಚ್ಚಿನ ಸ್ಕೋರ್ ದಾಖಲಿಸಿದೆ.

ಗರಿಷ್ಠ ಭಾರಿ 300ರ ಕ್ಕಿಂತ ಹೆಚ್ಚಿನ ಸ್ಕೋರ್ ಸಿಡಿಸಿದ ತಂಡ

ತಂಡಅವಧಿ300+ ಮೊತ್ತ
ಭಾರತ1996-2018101
ಆಸ್ಟ್ರೇಲಿಯಾ1975-201899
ಸೌತ್ಆಫ್ರಿಕಾ1994-201879
ಪಾಕಿಸ್ತಾನ1975-201869
ಶ್ರೀಲಂಕಾ1992-201866
ಇಂಗ್ಲೆಂಡ್1975-201865
ನ್ಯೂಜಿಲೆಂಡ್1975-201855
ವೆಸ್ಟ್ಇಂಡೀಸ್1978-201839
ಜಿಂಬಾಬ್ವೆ1992-201826