ಭಾರತ ಪ್ರವಾಸ ಮಾಡುವ ಯಾವುದೇ ಕ್ರಿಕೆಟ್ ತಂಡಗಳು ಕಡ್ಡಾಯವಾಗಿ ಆಫ್ಘಾನಿಸ್ತಾನದೊಂದಿಗೆ ಕನಿಷ್ಠ ಒಂದು ಪಂದ್ಯವನ್ನು ಆಡಲೇಬೇಕು ಎಂದು ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿದೆ. ಬಿಸಿಸಿಐ ಹೊರಡಿಸಿರುವ ಈ ಆದೇಶ ಕ್ರಿಕೆಟ್ ದಿಗ್ಗಜರ ಶ್ಲಾಘನೆಗೆ ಪಾತ್ರವಾಗಿದೆ.

ನವದೆಹಲಿ(ಜೂ.1): ಭಾರತ ಪ್ರವಾಸ ಮಾಡುವ ಯಾವುದೇ ಕ್ರಿಕೆಟ್ ತಂಡಗಳು ಕಡ್ಡಾಯವಾಗಿ ಆಫ್ಘಾನಿಸ್ತಾನದೊಂದಿಗೆ ಕನಿಷ್ಠ ಒಂದು ಪಂದ್ಯವನ್ನು ಆಡಲೇಬೇಕು ಎಂದು ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿದೆ. ಬಿಸಿಸಿಐ ಹೊರಡಿಸಿರುವ ಈ ಆದೇಶ ಕ್ರಿಕೆಟ್ ದಿಗ್ಗಜರ ಶ್ಲಾಘನೆಗೆ ಪಾತ್ರವಾಗಿದೆ.

ಕ್ರಿಕೆಟ್ ಲೋಕದ ಶಿಶು ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣೆಗೆಗೆ ಕೈಜೋಡಿಸಿರುವ ಬಿಸಿಸಿಐ, ಭಾರತ ಪ್ರವಾಸ ಮಾಡಲಿರುವ ಯಾವುದೇ ತಂಡ ಮೊದಲು ಆಫ್ಘಾನಿಸ್ತಾನ ತಂಡದ ವಿರುದ್ಧ ಕನಿಷ್ಠ ಒಂದು ಪಂದ್ಯವನ್ನು ಆಡಬೇಕು ಎಂಬ ಮಹತ್ವದ ನಿರ್ಣಯ ಕೈಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ಕಾರ್ಯಕಾರಿ ಮುಖ್ಯಸ್ಥ ಅಮಿತಾಭ್ ಚೌಧರಿ ನಿರ್ಧಾರ ಪ್ರಕಟಿಸಿದ್ದು, ಆಫ್ಘಾನಿಸ್ತಾನ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಶಕ್ತವಾಗಿದ್ದು, ಕ್ರಿಕೆಟ್ ಗೆ ಸಂಬಂಧಿಸಿದಂತೆ ಬಿಸಿಸಿಐ ಆ ದೇಶದ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ. 

ಅಲ್ಲದೇ ಕ್ರಿಕೆಟ್‌ ಎರಡು ದೇಶಗಳ ನಡುವಿನ ಸಂಬಂಧವನ್ನ ಬಲಪಡಿಸುತ್ತದೆ ಮತ್ತು ಶಾಂತಿ ಸಂದೇಶವನ್ನ ಸಾರಲಿದೆ ಎಂದು ಅಮಿತಾಬ್ ಚೌಧರಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಇದೇ ಜೂನ್‌ 14ರಿಂದ 18ರವರೆಗೆ ಅಫ್ಘನ್‌ ತಂಡ ಟೀಂ ಇಂಡಿಯಾ ವಿರುದ್ಧ ಬೆಂಗಳೂರಿನಲ್ಲಿ ಐತಿಹಾಸಿಕ ಟೆಸ್ಟ್‌ ಪಂದ್ಯ ಆಡಲಿದೆ.