Asianet Suvarna News Asianet Suvarna News

ಇಂದು ಸರಣಿ ಗೆದ್ದರೆ ಟೀಂ ಇಂಡಿಯಾ ನಿರ್ಮಿಸಲಿದೆ ಮತ್ತೊಂದು ದಾಖಲೆ..!

ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದ್ದ ಭಾರತ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, 2ನೇ ಪಂದ್ಯದಲ್ಲಿ 86 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ ತಿರುಗೇಟು ನೀಡಿತ್ತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಇಂದು ನಡೆಯಲಿರುವ ಪಂದ್ಯ ಮಹತ್ವ ಪಡೆದುಕೊಂಡಿದೆ.

Team India will aim for 10th consecutive ODI series win

ಹೆಡಿಂಗ್ಲೆ[ಜು.17]: ಭಾರತ- ಇಂಗ್ಲೆಂಡ್ ನಡುವಿನ 3ನೇ ಹಾಗೂ ಸರಣಿಯ ಅಂತಿಮ ಏಕದಿನ ಪಂದ್ಯ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ಪಂದ್ಯದೊಂದಿಗೆ ಸರಣಿ ಗೆದ್ದು ಸತತ 10ನೇ ದ್ವಿಪಕ್ಷೀಯ ಸರಣಿ ಜಯಿಸಿದ ದಾಖಲೆ ಬರೆಯುವ ಲೆಕ್ಕಾಚಾರ ವಿರಾಟ್ ಕೊಹ್ಲಿ ಪಡೆಯದ್ದಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದ್ದ ಭಾರತ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, 2ನೇ ಪಂದ್ಯದಲ್ಲಿ 86 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ ತಿರುಗೇಟು ನೀಡಿತ್ತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಇಂದು ನಡೆಯಲಿರುವ ಪಂದ್ಯ ಮಹತ್ವ ಪಡೆದುಕೊಂಡಿದೆ. ಈ ಜಯದೊಂದಿಗೆ ಐಸಿಸಿ ಏಕದಿನ ರ‍್ಯಾಂಕಿಂಗ್’ನಲ್ಲಿ ಇಂಗ್ಲೆಂಡ್ ನಂ.1 ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು. ಅಗ್ರಸ್ಥಾನಕ್ಕೇರಬೇಕೆಂಬ ಭಾರತಕ್ಕೆ ನಿರಾಸೆಯನ್ನುಂಟು ಮಾಡಿತು. ಅಂತಿಮ ಪಂದ್ಯ ಜಯಿಸುವ ಮೂಲಕ ಆಗಸ್ಟ್ 1 ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗೂ ಮುನ್ನ ಆತ್ಮವಿಶ್ವಾಸವನ್ನು ಡಬಲ್ ಮಾಡಿಕೊಳ್ಳುವ ಲೆಕ್ಕಾಚಾರ ಭಾರತದ್ದಾಗಿದೆ.

ದಾಖಲೆ ಮುಂದುವರಿಸುವ ತವಕ: 

2016ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಲ್ಲಿ ಏಕದಿನ ಸರಣಿ ಸೋತ ಬಳಿಕ, ಭಾರತ ಇನ್ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಸೋಲನ್ನು ಕಂಡಿಲ್ಲ. ಜಿಂಬಾಬ್ವೆ, ನ್ಯೂಜಿಲೆಂಡ್ (2 ಬಾರಿ), ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ (1 ಬಾರಿ), ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರು ಮತ್ತು ವಿದೇಶಿ ನೆಲದಲ್ಲಿ ವಿಜಯ ಪತಾಕೆ ಹಾರಿಸಿದೆ. ಅಲ್ಲದೇ 2011ರಿಂದ ಇಂಗ್ಲೆಂಡ್ ವಿರುದ್ಧ ಭಾರತ ಯಾವುದೇ ಏಕದಿನ ಸರಣಿಯನ್ನು ಸೋತಿಲ್ಲ. 7 ವರ್ಷಗಳಿಂದ ಉಳಿಸಿಕೊಂಡಿರುವ ದಾಖಲೆಯನ್ನು ಮತ್ತೆ ಮುಂದುವರಿಸುವ ಸುವರ್ಣ ಅವಕಾಶ ವಿರಾಟ್ ಕೊಹ್ಲಿ ಪಡೆಯ ಕೈಯಲ್ಲಿದೆ. 
2017ರ ಜನವರಿಯಲ್ಲಿ ನಡೆದಿದ್ದ ಸರಣಿಯಲ್ಲೂ ಭಾರತ 2-1 ರ ಅಂತರದಿಂದ ಜಯಿಸಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ ಮತ್ತೆ 2-1 ಅಂತರದಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ 2ನೇ ಏಕದಿನದಲ್ಲಿ ಇಂಗ್ಲೆಂಡ್ ತಿರುಗೇಟು ನೀಡಿದ ಲೆಕ್ಕಾಚಾರ ನೋಡಿದರೆ, ಭಾರತಕ್ಕೆ ಕಠಿಣ ಸವಾಲೊಡ್ಡುವುದು ಶತಃ ಸಿದ್ಧವಾಗಿದೆ. ಇನ್ನು ಡೆತ್ ಓವರ್‌ನಲ್ಲಿ ಬೌಲರ್’ಗಳು ದುಬಾರಿ ಆಗುತ್ತಿರುವುದು ವಿರಾಟ್ ತಲೆ ಬಿಸಿಗೆ ಕಾರಣವಾಗಿದೆ. ಲಾರ್ಡ್ಸ್ ಪಂದ್ಯದಲ್ಲಿ ಕೊನೆ 8 ಓವರ್‌ಗಳಲ್ಲಿ ಭಾರತ 82 ರನ್ ಬಿಟ್ಟುಕೊಟ್ಟಿತ್ತು. ಅದರಲ್ಲೂ ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್ ಹಾಗೂ ಹಾರ್ದಿಕ್ ಪಾಂಡ್ಯ 6 ಓವರ್‌ಗಳಲ್ಲಿ 62 ರನ್ ಬಿಟ್ಟು ಕೊಡುವ ಮೂಲಕ ತಂಡದ ಸೋಲಿಗೆ ಬುನಾದಿ ಹಾಕಿಕೊಟ್ಟಿದ್ದರು. ಅನುಭವಿ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ಗೈರು ತಂಡಕ್ಕೆ ಬಹುವಾಗಿ ಕಾಡುತ್ತಿದೆ. ನೆಟ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಭುವಿ, ಇನ್ನೂ ಪೂರ್ಣವಾಗಿ ಗಾಯದಿಂದ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. 3ನೇ ಪಂದ್ಯದಲ್ಲಿ ಅವರ ಲಭ್ಯತೆ ಪರಿಣಾಮಕಾರಿಯಾಗಲಿದೆ.

ತಲೆನೋವಾಗಿರುವ ಮಧ್ಯಮ ಕ್ರಮಾಂಕ:

ಭಾರತದ ಮಧ್ಯಮ ಕ್ರಮಾಂಕದ ಬಗ್ಗೆ ಮತ್ತೆ ಪ್ರಶ್ನೆ ಉದ್ಭವಿಸಿದೆ. ಲಂಕಾ ಪ್ರವಾಸ ಬಳಿಕ ತಂಡವನ್ನು ಕೂಡಿಕೊಂಡಿರುವ ಕೆ.ಎಲ್.ರಾಹುಲ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದ್ದು, ಲಾರ್ಡ್ಸ್ ಪಂದ್ಯದಲ್ಲಿ ಶೂನ್ಯಸಂಪಾದಿಸುವ ಮೂಲಕ ನಿರಾಸೆಯನ್ನುಂಟು ಮಾಡಿದ್ದರು. ಹಾರ್ದಿಕ್ ಪಾಂಡ್ಯ ಸಹ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಇನ್ನು ಬೆಂಚ್ ಕಾಯುತ್ತಿರುವ ದಿನೇಶ್ ಕಾರ್ತಿಕ್ ಹಾಗೂ ಶ್ರೇಯಸ್ ಅಯ್ಯರ್ ಸಹ ಉತ್ತಮ ಫಾರ್ಮ್‌ನಲ್ಲಿದ್ದು, ಇವರಿಗೂ ಅವಕಾಶ ದೊರೆಯುವುದನ್ನು ಅಲ್ಲಗಳೆಯುವಂತಿಲ್ಲ. ಕಳೆದ ಪಂದ್ಯದಲ್ಲಿ ಧೋನಿಯ ನಿಧಾನಗತಿಯ ಬ್ಯಾಟಿಂಗ್ ಟೀಕೆಗೆ ಗುರಿಯಾಗಿದ್ದರೂ, ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಅವರ ಬೆನ್ನಿಗೆ ನಿಂತಿದ್ದರು. ಹೀಗೆ ತಂಡದ ಮಧ್ಯಮ ಕ್ರಮಾಂಕ ಅಸ್ಥಿರವಾಗಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ತಂಡ ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ.

ಇಂಗ್ಲೆಂಡ್‌ಗೆ ರೂಟ್ ಬಲ: 

ಜೋ ರೂಟ್ ಲಯಕ್ಕೆ ಮರಳಿರುವುದು ಇಂಗ್ಲೆಂಡ್‌ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಅದರಲ್ಲೂ 2ನೇ ಏಕದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತ ಸ್ಪಿನ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ತಂಡ ಆತ್ಮಬಲ ಹೆಚ್ಚಿಸಿದೆ. ಆದರೆ, ಗಾಯದ ಸಮಸ್ಯೆಯಿಂದ ಆರಂಭಿಕ ಜೇಸನ್ ರಾಯ್ ಹೊರಬಿದ್ದಿದ್ದು, ಸ್ಯಾಮ್ ಬಿಲ್ಲಿಂಗ್ಸ್ ತಂಡ ಕೂಡಿಕೊಂಡಿದ್ದಾರೆ. ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಅದರನ್ನರಿತು ಅವರು ಆಡಬೇಕಿದೆ.

ಪಂದ್ಯ ಆರಂಭ: ಸಂಜೆ 5 ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್

Follow Us:
Download App:
  • android
  • ios