ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್ ತಂಡಕ್ಕೂ ತಟ್ಟಿದೆ.
ನವದೆಹಲಿ(ಫೆ.09): ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್ ತಂಡಕ್ಕೂ ತಟ್ಟಿದೆ.
ಸದ್ಯ ಇಂಗ್ಲೆಂಡ್ ಅಂಡರ್ 19 ವಿರುದ್ಧ ಭಾರತದ ಜೂನಿಯರ್ಸ್ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಈ ತಂಡವನ್ನು ಭಾರತದ ಗೋಡೆ ರಾಹುಲ್ ದ್ರಾವಿಡ್ ಕೋಚ್ ಮಾಡುತ್ತಿದ್ದಾರೆ. ಆದರೆ ಅಂಡರ್ 19 ಆಟಗಾರರಿಗೆ ಮತ್ತು ಕೋಚ್'ಗೆ ಸಿಗಬೇಕದ ದಿನಭತ್ಯ ಇದುವರೆಗೂ ಸಿಕ್ಕಿಲ್ಲ. ಇದರಿಂದ ದ್ರಾವಿಡ್ ಸೇರಿದಂತೆ ಆಟಗಾರರೂ ತಮ್ಮ ದಿನನಿತ್ಯದ ಖರ್ಚಿಗಾಗಿ ಪರದಾಡುತ್ತಿದ್ದಾರೆ. ಜೊತೆಗೆ ಊಟಕ್ಕೂ ಪರದಾಡುತ್ತಿದ್ದಾರೆ.
ಅಜಯ್ ಶಿರ್ಕೆ ರವರನ್ನು ಏಕಾಏಕಿ ವಜಾಗೊಳ್ಸಿದ್ರಿಂದ ಕೊಂಚ ಎಡವಟ್ಟಾಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಇದಕ್ಕೆ ಬಿಸಿಸಿಐ ತಿಳಿಸಿದೆ.
