ಪ್ರತಿ ಸರಣಿಯಲ್ಲಿ ಭಾರತಕ್ಕೆ ಇಂಜುರಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಸ್ಪಿನ್ನರ್ ಇಂಜುರಿಯಾಗೋ ಮೂಲಕ ತಂಡದಿಂದ ಹೊರಬಿದ್ದಿದ್ದಾರೆ. ಅಷ್ಟಕ್ಕೂ ತಂಡದಿಂದ ಹೊರಬಿದ್ದ ಸ್ಪಿನ್ನರ್ ಯಾರು? ಇಲ್ಲಿದೆ.
ಆಲೂರು(ಆ.26): ಇಂಡಿಯಾ ಎ, ಇಂಡಿಯಾ ಬಿ , ಸೌತ್ಆಫ್ರಿಕಾ ಎ ವಿರುದ್ದದ ಮಹತ್ವದ ಸರಣಿಯಿಂದ ಟೀಂ ಇಂಡಿಯಾ ಸ್ಪಿನ್ನರ್ ಜಯಂತ್ ಯಾದವ್ ಹೊರಬಿದ್ದಿದ್ದಾರೆ. ಈ ಮೂಲಕ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆಘಾತ ಎದುರಾಗಿದೆ.
ಟೀಂ ಇಂಡಿಯಾ ಪರ 4 ಟೆಸ್ಟ್ ಹಾಗೂ ಏಕೈಕ ಏಕದಿನ ಪಂದ್ಯ ಆಡಿರುವ ಜಯಂತ್ ಯಾದವ್ ಸದ್ಯ ಇಂಡಿಯಾ ಬಿ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ. ಆದರೆ ಸದ್ಯ ಇಂಜುರಿಗೆ ತುತ್ತಾಗಿರುವ ಜಯಂತ್ ಯಾದವ್, ಬೆಂಗಳೂರಿನ ಸಮೀಪ ಆಲೂರಿನಲ್ಲಿ ನಡೆಯುತ್ತಿರುವ ಚತುಷ್ಕೋನ್ ಸರಣಿಗೆ ಅಲಭ್ಯರಾಗಿದ್ದಾರೆ.
ಇಂಡಿಯಾ ಬಿ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ 12 ಅಂಕಗಳನ್ನ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಡಿದ 4 ಪಂದ್ಯದಲ್ಲಿ 2 ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಇನ್ನುಳಿದ 2 ಪಂದ್ಯಗಳು ಮಳೆಯಿಂದ ರದ್ದಾಗಿತ್ತು. ಇದೀಗ ಜಯಂತ್ ಅಲಭ್ಯತೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.
