ಲೌಡರ್‌ಹಿಲ್(ಆ.04): ರೋಹಿತ್ ಶರ್ಮಾ- ಶಿಖರ್ ಧವನ್ ಉತ್ತಮ ಆರಂಭ ಹಾಗೂ ಕ್ರುನಾಲ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮೊತ್ತ ಪೇರಿಸಿದೆ ಭಾರತ 5 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿದೆ. ಈ ಮೂಲಕ ವಿಂಡೀಸ್ ತಂಡಕ್ಕೆ 168 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 67 ರನ್ ಜೊತೆಯಾಟ ನೀಡಿತು. ಸ್ಫೋಟಕ  ಬ್ಯಾಟಿಂಗ್ ಪ್ರದರ್ಶನ ನೀಡಿದ 16 ಎಸೆತದಲ್ಲಿ 23 ರನ್ ಸಿಡಿಸಿ ಔಟಾದರು. ಇತ್ತರ ರೋಹಿತ್ ಶರ್ಮಾ ಹಾಫ್ ಸೆಂಚುರಿ ಬಾರಿಸಿದರು.

ರೋಹಿತ್ ಶರ್ಮಾ 51 ಎಸೆತದಲ್ಲಿ 67 ರನ್ ಸಿಡಿಸಿ ಔಟಾದರು. ರಿಷಬ್ ಪಂತ್ ಮತ್ತೆ ವೈಫಲ್ಯ ಅನುಭವಿಸೋ ಮೂಲಕ ಧೋನಿ ಉತ್ತರಾಧಿಕಾರಿ ಅನ್ನೋ ಹಣೆಪಟ್ಟಿಗೆ ಕಳಂಕ ತಂದರು. ನಾಯಕ ವಿರಾಟ್ ಕೊಹ್ಲಿ ಆಟ 28 ರನ್‌ಗೆ ಅಂತ್ಯವಾಯಿತು. ಮೊದಲ ಪಂದ್ಯದಲಿ ನಿರಾಸೆ ಅನುಭವಿಸಿದ ಮನೀಶ್ ಪಾಂಡೆ, ಇದೀಗ 2ನೇ ಪಂದ್ಯದಲ್ಲೂ ಬರವಸೆ ಮೂಡಿಸಲಿಲ್ಲ. ಕೇವಲ 6 ರನ್ ಸಿಡಿಸಿ ಔಟಾದರು.

ಕ್ರುನಾಲ್ ಪಾಂಡ್ಯ ಅಜೇಯ 20 ರನ್ ಹಾಗೂ ರವೀಂದ್ರ ಜಡೇಜಾ ಅಜೇಯ 9 ರನ್ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ 167 ನಷ್ಟಕ್ಕೆ ರನ್ ಸಿಡಿಸಿತು.