ನವದೆಹಲಿ(ಸೆ.11):ಟೀಮ್ ಇಂಡಿಯಾ ಆಟಗಾರರು ಕೋಟಿ ಕೋಟಿ ಸಂಪಾದಿಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಆ ಕೋಟಿಗಳು ಹೇಗೆ ಬರುತ್ತೆ ಅನ್ನೋದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಆಟಗಾರರ ವೇತನದ ಬಗ್ಗೆ ಕುತೂಹಲ ಇದ್ಯಾ..? ಹಾಗಾದ್ರೆ ಈ ಸ್ಟೋರಿ ನೋಡಿ.
ಟೀಮ್ ಇಂಡಿಯಾ ಆಟಗಾರರು ಕೋಟಿ ಕೋಟಿ ಸಂಪಾದಿಸ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಪ್ರತಿ ಆಟಗಾರನೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿರ್ತಾನೆ.
ಟೀಮ್ ಇಂಡಿಯಾದಲ್ಲಿ ಆಡುವ ಪ್ರತಿ ಆಟಗಾರನೂ ವಾರ್ಷಿಕ ವೇತನವನ್ನು ಪಡ್ಕೊಳ್ತಾರೆ. ಈ ವಾರ್ಷಿಕ ವೇತನವನ್ನು ಬಿಸಿಸಿಐ 3 ವಿಭಾಗಗಳಲ್ಲಿ ವಿಂಗಡಿಸಿದೆ. ಎ, ಬಿ ಹಾಗೂ ಸಿ ಎಂದು. ಅನುಭವ ಹಾಗೂ ಪ್ರದರ್ಶನದ ಆಧಾರದ ಮೇಲೆ ಎ ಮತ್ತು ಬಿ ವಿಭಾಗಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತೆ. ಇನ್ನು ಸಿ ವಿಭಾಗದ ವೇತನವನ್ನು ಡೆಬ್ಯೂ ಆಟಗಾರಿಗೆ ನೀಡಲಾಗುತ್ತೆ. ಅಲ್ಲದೆ, ಫಾರ್ಮ್ ಕೊರತೆ ಎದುರಿಸ್ತಿರೋ ಆಟಗಾರರು ಇದರಲ್ಲಿಯೇ ಇರ್ತಾರೆ.
ಎ ವಿಭಾಗದಲ್ಲಿ ಸ್ಥಾನ ಪಡ್ಕೊಂಡಿರೋ ಪ್ರತಿ ಆಟಗಾರನಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಗಳನ್ನು ನೀಡಲಾಗುತ್ತೆ. ಇನ್ನು ಬಿ ಹಾಗೂ ಸಿ ಗುಂಪಿನ ಆಟಗಾರರು ಕ್ರಮವಾಗಿ 50 ಲಕ್ಷ ಹಾಗೂ 25 ಲಕ್ಷ ರೂಪಾಯಿಗಳಿಗೆ ಭಾಜನರಾಗ್ತಾರೆ.
ಇಷ್ಟೆ ಅನ್ನೋದಾದ್ರೆ, ಕೋಟಿ ಕೋಟಿ ಹೇಗೆ ಬರತ್ತೆ ಎಂದರೆ ಪ್ರತಿ ಪಂದ್ಯಕ್ಕೂ ಆಟಗಾರರಿಗೆ ಸಿಗುತ್ತೆ ಹಣ. ಈಗಲೇ ಹೇಳಿದಂತೆ ವಾರ್ಷಿಕ ವೇತನದ ಜೊತೆಗೆ ಪ್ರತಿ ಪಂದ್ಯಕ್ಕೂ ಇಂತಿಷ್ಟು ಹಣ ಅಂತ ನೀಡಲಾಗುತ್ತೆ. ಆದರೆ, ಇದರಲ್ಲಿ ಗ್ರೇಡ್ ಮಾದರಿ ಇರೋದಿಲ್ಲ. ಪ್ರತಿ ಆಟಗಾರನಿಗೂ ಸಮನಾದ ಮೊತ್ತವ ನೀಡಲಾಗುತ್ತೆ.
ಪ್ರತಿ ಒಂದು ಟೆಸ್ಟ್ಗೆ 5 ಲಕ್ಷ ರೂಪಾಯಿ. ಪ್ರತಿ ಏಕದಿನ ಪಂದ್ಯಕ್ಕೂ 3 ಲಕ್ಷ ರೂಪಾಯಿ ಹಾಗೂ ಪ್ರತಿ ಟಿ20 ಪಂದ್ಯಕ್ಕೂ 1.50 ಲಕ್ಷ ರೂಪಾಯಿ ಹಣ ನೀಡಲಾಗುತ್ತೆ. ಆಟಗಾರರು ತೋರುವ ವೈಯಕ್ತಿಕ ಉತ್ತಮ ಪ್ರದರ್ಶನಕ್ಕೂ ಬಿಸಿಸಿಐ ಹಣ ಕೊಡುತ್ತೆ. ಟೆಸ್ಟ್ ಹಾಗೂ ಒಂಡೇಯಲ್ಲಿ ಶತಕ ಸಿಡಿಸಿದರೆ, 5 ಲಕ್ಷ ರೂಪಾಯಿ. ಹಾಗೇನೆ ಡಬಲ್ ಸೆಂಚುರಿ ಮಾಡಿದರೆ 7 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತೆ. ಬೌಲಿಂಗ್ನಲ್ಲಿ 5 ವಿಕೆಟ್ ಸಾಧನೆ ಮಾಡಿದವರಿಗೆ 5 ಲಕ್ಷ ರೂಪಾಯಿ ಹಾಗೂ ಟೆಸ್ಟ್ನಲ್ಲಿ 10 ವಿಕೆಟ್ ಪಡೆದವರಿಗೆ 7 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತೆ.
ತಂಡಕ್ಕೂ ಸಿಗುತ್ತೆ ಬಂಪರ್ ಬೋನಸ್ :
ವೈಯಕ್ತಿಕವಾಗಿ ಆಟಗಾರರಿಗೆ ಬೋನಸ್ ಸಿಗೋದು ಮಾತ್ರವಲ್ಲ ತಂಡದ ಪ್ರತಿ ಗೆಲುವಿಗೂ ಬೋನಸ್ ನೀಡಲಾಗುತ್ತೆ. ಟೆಸ್ಟ್ನಲ್ಲಿ ಟಾಪ್ 3 ಱಂಕ್ ಹೊಂದಿರೋ ತಂಡದ ವಿರುದ್ಧ ಗೆಲುವು ದಾಖಲಿಸಿದರೆ, ಪಂದ್ಯದ ಶೇಕಡ 50 ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತೆ. ಹಾಗೆಯೇ ಸರಣಿ ಜಯ ದಾಖಲಿಸಿದರೆ, ಇದು ಶೇಕಡ 100ರಷ್ಟು ಹೆಚ್ಚಾಗುತ್ತೆ. ಇನ್ನು ಪ್ರತಿ ವಿಶ್ವಕಪ್ ಪಂದ್ಯಗಳ ಗೆಲುವಿಗೆ ಶೇಕಡ 300 ರಷ್ಟು ಹೆಚ್ಚುವರಿ ಹಣವನ್ನು ಪಡೆದುಕೊಳ್ತಾರೆ.
ಇದು ಟೀಮ್ ಇಂಡಿಯಾ ಆಟಾಗರರು ವೇತನ ರೂಪದಲ್ಲಿ ಪಡೆಯೋ ಹಣವಾಗಿದೆ. ಇದಲ್ಲದೇ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವೈಯಕ್ತಿಕ ಸಂಪಾದನೆಯನ್ನು ಮಾಡಿಕೊಳ್ತಾರೆ. ಐಪಿಎಲ್ನಲ್ಲೂ ಹೀಗೆಯೇ ಕೋಟಿ ಕೋಟಿ ಹಣವನ್ನು ಆಟಗಾರರ ಬಾಚಿಕೊಳ್ತಾರೆ. ಹಾಗಂತ ಇದರ ಹಿಂದೆ ಅವರ ಪರಿಶ್ರಮ ಇಲ್ಲ ಅಂತಲ್ಲ. ಖಂಡಿತವಾಗಿಯೂ ಇದೆ.
