ನವದೆಹಲಿ(ಸೆ.09): ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್, ಇಂಗ್ಲಿಷ್ ಕೌಂಟಿ ಚಾಂಪಿಯನ್ ಶಿಪ್‌ನ ಫೈನಲ್ ಹಂತದ 3 ಪಂದ್ಯಗಳಲ್ಲಿ ಎಸ್ಸೆಕ್ಸ್ ತಂಡದ ಪರ ಆಡಲಿದ್ದಾರೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ. 

ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಇನ್ನುಳಿದ ಪಂದ್ಯಗಳಿಂದ ಮುರುಳಿ ವಿಜಯ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಮರುಳಿ ವಿಜಯ್ ಬದಲು ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ.

ಟೀಂ ಇಂಡಿಯಾದಿಂದ ಹೊರಬಿದ್ದಿರುವ  ಮುರಳಿ, ಟ್ರೆಂಟ್‌ಬ್ರಿಡ್ಜ್ ನಲ್ಲಿ ಸೆ.10 ರಿಂದ ನಾಟಿಂಗ್‌ಹ್ಯಾಮ್ ವಿರುದ್ಧ, ಸೆ.18ರಿಂದ ವರ್ಸೆಸ್ಟರ್‌ಶೈರ್ ವಿರುದ್ಧ 2ನೇ ಹಾಗೂ ಸೆ.24 ರಿಂದ ಸರ್ರೆ ವಿರುದ್ಧ 3ನೇ ಪಂದ್ಯವನ್ನಾಡಲಿದ್ದಾರೆ.