ಗೋಕರ್ಣ(ಏ.28): ಭಾರತದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸದ್ಯ ಐಪಿಎಲ್ ಟೂರ್ನಿಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ ಅನಿಲ್ ಕುಂಬ್ಳೆ ದಂಪತಿ , ಪ್ರಸಿದ್ಧ ಶಿವನ ಆತ್ಮಲಿಂಗಕ್ಕೆ ಪೂಜೆ ಹಾಗೂ ಅಭಿಷೇಕ ನೆರವೇರಿಸಿದರು.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಪ್ರಕಟಿಸಿದ ಅನಿಲ್ ಕುಂಬ್ಳೆ!

ಕುಂಬ್ಳೆ ದಂಪತಿ, ಶಿವನ ದೇವಾಲಯದಲ್ಲಿ ವಿಶೇಷ, ಪೂಜೆ ನೆರವೇರಿಸಿದರು. ನವಧಾನ್ಯ, ಗಂಗಾಭಿಷೇಕ ಪೂಜೆ ಹಾಗೂ ಆತ್ಮಲಿಂಗಕ್ಕೆ ಪಂಜಾಮೃತ ಪೂಜೆ ಸಲ್ಲಿಸಿದರು.  ಈ ವೇಳೆ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಅರ್ಚಕರು ಸ್ಮರಣಿಕೆ ನೀಡಿ ಗೌರವಿಸಿದರು. 

ಇದನ್ನೂ ಓದಿ: ಅನಿಲ್ ಕುಂಬ್ಳೆ ರಾಜೀನಾಮೆ ಸೀಕ್ರೆಟ್ಸ್ ಬಿಚ್ಚಿಟ್ಟ ಲಕ್ಷ್ಮಣ್..!

ಆಡಳಿತ ಮಂಡಳಿ ಸದಸ್ಯರು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗನ ಜೊತೆ ಫೋಟೋ ತೆಗಿಸಿಕೊಂಡು ಸಂಭ್ರಮಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಕಬಳಿಸಿರುವ ಕುಂಬ್ಳೆ, ಗರಿಷ್ಠ ವಿಕೆಟ್ ಕಬಳಿಸಿದ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.