ಪ್ರಧಾನಿ ನರೇಂದ್ರ ಮೋದಿ 68ನೇ ಹುಟ್ಟುಹಬ್ಬಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ. ಇಲ್ಲಿದೆ ಕ್ರಿಕೆಟಿಗರು ಶುಭಾಶಯ.
ನವದೆಹಲಿ(ಸೆ.17): ಪ್ರಧಾನಿ ನರೇಂದ್ರ ಮೋದಿ ಇಂದು 68ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2014ರಲ್ಲಿ ಭಾರತದ 15ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ, ವಿಶ್ವದಲ್ಲೆ ಜನಮನ್ನಣೆಗಳಿಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇಂದು ಮೋದಿ 68ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಪ್ರಧಾನಿ ಮೋದಿ ಹುಟ್ಟಹಬ್ಬಕ್ಕೆ ವಿಶ್ವದ ಹಲವು ಗಣ್ಯರು ಶುಭಕೋರಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ಮೋದಿ ಹುಟ್ಟುಹಬ್ಬಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದಾರೆ.
ಇಲ್ಲಿದೆ ಟೀಂ ಇಂಡಿಯಾ ಕ್ರಿಕೆಟಿಗರ ಹುಟ್ಟಹಬ್ಬದ ಟ್ವೀಟ್:
