ಶ್ರೀಹರಿಕೋಟಾ(ಜು.22):  ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ  GSLV ಮಾರ್ಕ್ 3’ ರಾಕೆಟ್‌ ಚಂದ್ರಯಾನ 2 ಹೊತ್ತು ನಭೋಮಂಡಲ ಸೇರಿದೆ. ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಕೋರಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ಚಂದ್ರಯಾನ 2 ಯಶಸ್ವಿ ಉಡಾವಣೆಗೆ ಸಂತಸ ವ್ಯಕ್ತಪಿಸಿದ್ದಾರೆ.