ಶಿಕ್ಷಕರ ದಿನಚಾರಣೆ ಪ್ರಯುಕ್ತ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಕೋಚ್ ಹಾಗೂ ಮಾರ್ಗದರ್ಶಿಗಳಿಗೆ ಶುಭಾಶಯ ಕೋರಿದ್ದಾರೆ. ಈ ಮೂಲಕ ತಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಗುರುಗಳಿಗೆ ಗೌರವ ಸಲ್ಲಿಸಿದ್ದಾರೆ.
ಬೆಂಗಳೂರು(ಸೆ.05): ದೇಶದೆಲ್ಲೆಡೆ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಬಾಳನ್ನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ಶಾಲಾದಿನಗಳಿಂದ ಹಿಡಿದು ವೃತ್ತಿಪರ ದಿನಗಳಲ್ಲೂ ಗುರುಗಳ ಮಾರ್ಗದರ್ಶನವೇ ದಾರಿ ದೀಪ. ಇದಕ್ಕೆ ಕ್ರಿಕೆಟಿಗರು ಕೂಡ ಹೊರತಲ್ಲ.
ಶಿಕ್ಷಕರ ದಿನಾಚರಣೆ ದಿನ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಬಾಲ್ಯದಲ್ಲಿ ಕೋಚ್‌ಗಳನ್ನ ನೆನಪಿಸಿದ್ದಾರೆ.. ಹಲವು ಕ್ರಿಕೆಟಿಗರು ಟ್ವಿಟರ್ ಮೂಲಕ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರ ಶಿಕ್ಷಕರ ದಿನಾಚರಣೆ ಶುಭಾಶಯ ಇಲ್ಲಿದೆ.
