ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಸಂದರ್ಶನ ಶುರು

ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆಯಾದ ಬೆನ್ನಲ್ಲೇ ಇದೀಗ ಸಹಾಯಕ ಸಿಬ್ಬಂದಿ ಸಂದರ್ಶನ ಆರಂಭವಾಗಿದೆ.ಸೋಮವಾರ ಬ್ಯಾಟಿಂಗ್‌ ಕೋಚ್‌ ಹುದ್ದೆಗೆ 13, ಬೌಲಿಂಗ್‌ ಕೋಚ್‌ ಹುದ್ದೆಗೆ ಐವರು ಅಭ್ಯರ್ಥಿಗಳ ಸಂದರ್ಶನ ನಡೆಸಲಾಯಿತು.ಈ ಕುರಿತಾದ ವರದಿ ಇಲ್ಲಿದ ನೋಡಿ....

Team India Cricket Team support staff selection begins

ಮುಂಬೈ[ಆ.20]: ರವಿಶಾಸ್ತ್ರಿಯನ್ನು ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮಕ ಮಾಡಿದ ಬಳಿಕ ಬಿಸಿಸಿಐ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. 

ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸೋಮವಾರ ಒಟ್ಟು 18 ಅಭ್ಯರ್ಥಿಗಳ ಸಂದರ್ಶನ ನಡೆಸಿತು. ಆ.22ರ ವರೆಗೂ ಸಂದರ್ಶನ ಪ್ರಕ್ರಿಯೆ ಮುಂದುವರಿಯಲಿದ್ದು, ಈ ವಾರಾಂತ್ಯಕ್ಕೆ ಹೊಸ ಕೋಚ್‌ಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ಸೋಮವಾರ ಬ್ಯಾಟಿಂಗ್‌ ಕೋಚ್‌ ಹುದ್ದೆಗೆ 13, ಬೌಲಿಂಗ್‌ ಕೋಚ್‌ ಹುದ್ದೆಗೆ ಐವರು ಅಭ್ಯರ್ಥಿಗಳ ಸಂದರ್ಶನ ನಡೆಸಲಾಯಿತು. ಪ್ರಧಾನ ಕೋಚ್‌ ಹುದ್ದೆಗೆ ಆಕಾಂಕ್ಷಿಯಾಗಿದ್ದ ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್‌ ಚಂದ್‌ ರಜಪೂತ್‌, ಬ್ಯಾಟಿಂಗ್‌ ಕೋಚ್‌ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ. ಈ ಹುದ್ದೆಗೆ ಮಾಜಿ ಕ್ರಿಕೆಟಿಗ ವಿಕ್ರಮ್‌ ರಾಥೋಡ್‌ ಹೆಸರು ಸಹ ಬಲವಾಗಿ ಕೇಳಿಬರುತ್ತಿದೆ. ಇಂಗ್ಲೆಂಡ್‌ನ ಮಾಜಿ ಆಟಗಾರ ಜೊನಾಥನ್‌ ಟ್ರಾಟ್‌ ಸಹ ಬ್ಯಾಟಿಂಗ್‌ ಕೋಚ್‌ ಆಗಲು ಆಸಕ್ತಿ ತೋರಿದ್ದಾರೆ. 

ರವಿ ಶಾಸ್ತ್ರಿ ಪುನರ್ ಆಯ್ಕೆ; ರೋಸಿ ಹೋದ ಅಭಿಮಾನಿಗಳಿಂದ ಟ್ವೀಟ್!

ಬೌಲಿಂಗ್‌ ಕೋಚ್‌ ರೇಸ್‌ನಲ್ಲಿ ಕರ್ನಾಟಕದ ವೆಂಕಟೇಶ್‌ ಪ್ರಸಾದ್‌, ಸುನಿಲ್‌ ಜೋಶಿ, ದೊಡ್ಡ ಗಣೇಶ್‌ ಇದ್ದಾರೆ. ಹಾಲಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ರ ಸಂದರ್ಶನವನ್ನು ಮಂಗಳವಾರ ನಡೆಸಲಾಗುತ್ತದೆ.
 

Latest Videos
Follow Us:
Download App:
  • android
  • ios