ಮುಂಬೈ(ಜ.11): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸತತ ಎರಡನೇ ವರ್ಷವೂ ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 2018ರಲ್ಲಿ ಶೇ.18ರಷ್ಟು ಅಂದರೆ 1253 ಕೋಟಿ ರು.ಗೆ ಏರಿಕೆಯಾಗಿದೆ. 2018ರ ನವೆಂಬರ್ 18ರ ವರೆಗೆ ಕೊಹ್ಲಿ 24 ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡಿದ್ದಾರೆ ಎಂದು ಜಾಗತಿಕ ಮೌಲ್ಯಮಾಪನ ಮತ್ತು ಕಾರ್ಪೊರೇಟ್ ಹಣಕಾಸು ಸಲಹೆಗಾರ ಸಂಸ್ಥೆ ಡಫ್ ಆ್ಯಂಡ್ ಫೆಲಿಪ್ಸ್, ಭಾರತದ ಮೌಲ್ಯಯುತ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ನಾಲ್ಕನೇ ಆವೃತ್ತಿಯ ವರದಿಯಲ್ಲಿ ತಿಳಿಸಿದೆ. 

ಕೊಹ್ಲಿ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 717 ಕೋಟಿ ರು. ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ 20 ಅಗ್ರ 20 ಸೆಲೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯ 6139 ಕೋಟಿ ರು.ಗಳಾಗಿವೆ. ನಟರಾದ ಅಕ್ಷಯ್ ಮತ್ತು ರಣವೀರ್ ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದು, 3 ಮತ್ತು 4ನೇ ಸ್ಥಾನ ಪಡೆದಿದ್ದಾರೆ.