ನಾಯಕನಾಗಿ ಕೊಹ್ಲಿ ತೆಕ್ಕೆಗೆ ಮತ್ತೊಂದು ದಾಖಲೆ..!

First Published 17, Jul 2018, 6:33 PM IST
Team India Captain Virat Kohli Reach Another Milestone
Highlights

ಹೌದು, ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಮೂರು ಸಾವಿರ ರನ್ ಪೂರೈಸಿದ ಏಕದಿನ ತಂಡದ ನಾಯಕ ಎಂಬ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಕೇವಲ 49 ಇನ್ನಿಂಗ್ಸ್’ಗಳನ್ನಾಡಿ ಮೂರು ಸಾವಿರ ರನ್ ಪೂರೈಸಿದ್ದಾರೆ.

ಲೀಡ್ಸ್[ಜು.17]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದು ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಇದೀಗ ಲೀಡ್ಸ್’ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ನಿರ್ಣಾಯಕ ಪಂದ್ಯ ದಲ್ಲಿ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.

ಹೌದು, ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಮೂರು ಸಾವಿರ ರನ್ ಪೂರೈಸಿದ ಏಕದಿನ ತಂಡದ ನಾಯಕ ಎಂಬ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಕೇವಲ 49 ಇನ್ನಿಂಗ್ಸ್’ಗಳನ್ನಾಡಿ ಮೂರು ಸಾವಿರ ರನ್ ಪೂರೈಸಿದ್ದಾರೆ. ಈ ಮೊದಲು ದಕ್ಷಿಣ ಆಫ್ರಿಕಾ ನಾಯಕರಾಗಿದ್ದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 60 ಇನ್ನಿಂಗ್ಸ್’ಗಳಲ್ಲಿ ಮೂರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಆರ್’ಸಿಬಿಯ ಸಹ ಆಟಗಾರ ಎಬಿ ಡಿವಿಲಿಯರ್ಸ್ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಟೀಂ ಇಂಡಿಯಾ 20 ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ 41 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಏಕದಿನ ಕ್ರಿಕೆಟ್’ನಲ್ಲಿ ಅತಿ ವೇಗವಾಗಿ ಮೂರು ಸಾವಿರ ರನ್ ಪೂರೈಸಿದ ನಾಯಕರಿವರು:

ನಾಯಕ                       ಇನ್ನಿಂಗ್ಸ್
ವಿರಾಟ್  ಕೊಹ್ಲಿ                49*
ಎಬಿ ಡಿವಿಲಿಯರ್ಸ್            60
ಎಂ.ಎಸ್ ಧೋನಿ             70*
ಸೌರವ್ ಗಂಗೂಲಿ            74
ಗ್ರೇಮ್ ಸ್ಮಿತ್                  83
ಮಿಸ್ಬಾ ಉಲ್ ಹಕ್           83

[* ಈ ಪಟ್ಟಿಯಲ್ಲಿ ಕೊಹ್ಲಿ ಹಾಗೂ ಧೋನಿ ಮಾತ್ರ ಕ್ರಿಕೆಟ್’ನಲ್ಲಿ ಸಕ್ರಿಯರಾಗಿದ್ದು, ಉಳಿದ ಕ್ರಿಕೆಟಿಗರು ನಿವೃತ್ತಿ ಘೋಷಿಸಿದ್ದಾರೆ]

loader