ಭಾರತದಲ್ಲೂ ಫಿಫಾ ಫುಟ್ಬಾಲ್ ಜ್ವರ-ಮನೆಗೆ ಅರ್ಜೆಂಟೀನಾ ಜರ್ಸಿ ಬಣ್ಣ ಬಳಿದ ಅಭಿಮಾನಿ

ಕೋಲ್ಕತ್ತಾದ ಫುಟ್ಬಾಲ್ ಅಭಿಮಾನಿ ಶಿಬ್ ಶಂಕರ್, ಕೂಡಿಟ್ಟ ಹಣದಲ್ಲಿ ರಷ್ಯಾಗೆ ತೆರಳಿ ಪಂದ್ಯ ವೀಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇದ್ದ ಹಣದಲ್ಲಿ ಮನೆಯನ್ನೇ ಅರ್ಜೆಂಟೀನ ತಂಡವನ್ನಾಗಿ ಮಾಡಿದ್ದಾರೆ.
 

Tea stall owner paints entire house in Argentina colours

ಕೋಲ್ಕತ್ತಾ(ಜೂನ್.10): ಫಿಫಾ ವಿಶ್ವಕಪ್ ಫುಟ್ಬಾಲ್ ಜ್ವರ ಭಾರತದಲ್ಲೂ ಆವರಿಸಿದೆ. ಅದರಲ್ಲೂ ಭಾರತದ ಫುಟ್ಬಾಲ್ ರಾಜಧಾನಿ ಕೋಲ್ಕತ್ತಾದಲ್ಲಿ ಫುಟ್ಬಾಲ್ ಅಭಿಮಾನಿ ತನ್ನ ಮನೆಗೆ ಅರ್ಜೆಂಟೀನಾ ತಂಡದ ಜರ್ಸಿ ಕಲರ್ ಬಳಿದಿದ್ದಾರೆ.

53 ವರ್ಷದ ಶಿಬ್ ಶಂಕರ್, ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿ ಅಭಿಮಾನಿ. ಈ ಬಾರಿಯಾದರೂ ರಶ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿನ ಅರ್ಜೆಂಟೀನಾ ಪಂದ್ಯವನ್ನ ವೀಕ್ಷಿಸಬೇಕು ಅನ್ನೋದು ಶಿಬ್ ಶಂಕರ್ ಕನಸಾಗಿತ್ತು. ಆದರೆ ಟೀ ಸ್ಟಾಲ್ ಅಂಗಡಿಯೊಂದನ್ನ ನಡೆಸುತ್ತಿರುವ ಶಿಬ್ ಶಂಕರ್ ದುಡಿದ ಹಣದಲ್ಲಿ 60 ಸಾವಿರ ಉಳಿತಾಯ ಮಾಡಿದ್ದರು.

ಶಂಕರ್ ಉಳಿತಾಯ ಹಣದಲ್ಲಿ ರಶ್ಯಾದಲ್ಲಿ ಪಂದ್ಯ ವೀಕ್ಷಿಸಲು ಸಾಧ್ಯವಿಲ್ಲ. ರಶ್ಯಾಗೆ ತೆರಳಿ ಪಂದ್ಯ ವೀಕ್ಷಿಸಲು ಕನಿಷ್ಠ 1.15 ಲಕ್ಷ ರೂಪಾಯಿ ಬೇಕು ಎಂದು ಟ್ರಾವೆಲ್ ಎಜೆಂಟ್ ಹೇಳಿದ್ದಾರೆ. ಬೇಸರಗೊಂಡ ಅಭಿಮಾನಿ, ತಕ್ಷಣವೇ ಪೈಂಟರ್‌ಗಳನ್ನ ಕರೆದು ಅರ್ಜೆಂಟೀನಾ ಜರ್ಸಿ ಕಲರ್ ಬಣ್ಣ ಬಳಿಯುವಂತೆ ಹಣ ನೀಡಿದ್ದಾರೆ.ಶಿಬ್ ಶಂಕರ್ ಮನೆ ಇದೀಗ ಅರ್ಜೆಂಟೀನಾ ಜರ್ಸಿ ಕಲರ್‌ನಿಂದ ಕಂಗೊಳಿಸುತ್ತಿದೆ. 

ನಾನು ಮಧ್ಯ ಸೇವಿಸಲ್ಲ, ಸಿಗರೇಟು ಸೇದಲ್ಲ. ನನಗಿರೋದು ಒಂದೇ ಚಟ ಅದು ಲಿಯೋನಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ಫುಟ್ಬಾಲ್ ತಂಡ. ಹೀಗಾಗಿ ಇದ್ದ ಹಣದಲ್ಲಿ ಪಂದ್ಯ ವೀಕ್ಷಿಸಲು ಸಾಧ್ಯವಾಗಲಿಲ್ಲ. ಇದೀಗ ಇಡೀ ಮನೆ ಅರ್ಜೆಂಟೀನಾ ತಂಡದ ಬಣ್ಣವಾಗಿ ಕಂಗೊಳಿಸುತ್ತಿರೋದು ಸಂತಸ ತಂದಿದೆ ಎಂದು ಶಿಬ್ ಶಂಕರ್ ಪಿಟಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios