ಹರಾರೆ(ಜು.05): ಜಿಂಬಾಬ್ವೆಯ ಹರಾರೆಯಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಪಾಕಿಸ್ತಾನ ಗೆಲುವಿನ ಓಟ ಮುಂದುವರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 45 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಜಿಂಬಾಬ್ವೆ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಪಾಕ್ ಹಾಗೂ ಆಸ್ಟ್ರೇಲಿಯಾ ಈಗಾಗಲೇ ಫೈನಲ್ ತಲುಪಿದೆ. ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿತು. ಫಕರ್ ಜಮೀನ್ 73 ರನ್ ಸಿಡಿಸಿದರೆ, ಆಸಿಫ್ ಆಲಿ 37 ರನ್‌ಗಳ ಕಾಣಿಕೆ ನೀಡಿದರು.

195 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಶಹೀನ್ ಆಫ್ರಿದಿ ದಾಳಿಗೆ ತತ್ತರಿಸಿತು. ಜಿಂಬಾಬ್ವೆ ವಿರುದ್ಧ ವಿಶ್ವದಾಖಲೆ ನಿರ್ಮಿಸಿದ್ದ ನಾಯಕ ಆರೋನ್ ಫಿಂಚ್ ಕೇವಲ 16 ರನ್‌ಗಳಿಸಿ ಔಟಾದರು. ಅಲೆಕ್ಸ್ ಕ್ಯಾರಿ 37 ರನ್‌ಗಳ ಕಾಣಿಕೆ ಹೊರತು ಪಡಿಸಿದರೆ, ಇನ್ಯಾವ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಹೋರಾಟ ನೀಡಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡುು 149 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.