ನವದೆಹಲಿ[ಆ.08]: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ), ಟಿ10 ಕ್ರಿಕೆಟ್ ಲೀಗ್‌ಗೆ ಮಾನ್ಯತೆ ನೀಡಿದೆ. ಇದು ಹಲವು ಕ್ರಿಕೆಟ್ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದ್ದು, ಕೇವಲ ಮನರಂಜನೆಗೋಸ್ಕರ ಕ್ರಿಕೆಟ್ ಮೌಲ್ಯವನ್ನು ಹಾಳು ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. 

ಶಾರ್ಜಾದಲ್ಲಿ ನವೆಂಬರ್ 23ರಿಂದ 2ನೇ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್ ನಡೆಯಲಿದ್ದು, ಶಾಹಿದ್ ಅಫ್ರಿದಿ, ಶೇನ್ ವಾಟ್ಸನ್, ರಶೀದ್ ಖಾನ್, ಸುನಿಲ್ ನರೈನ್, ಇಯಾನ್ ಮೊರ್ಗನ್ ಸೇರಿ ಇನ್ನೂ ಹಲವು ತಾರಾ ಅಂ.ರಾ.ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

ಇದನ್ನು ಓದಿ: ಟಿ20 ಆಯ್ತು, ಇದೀಗ ಟಿ10 ಸರದಿ; ಮಿಂಚು ಹರಿಸಲು ರೆಡಿಯಾದ ವೀರೂ, ಗೇಲ್, ಅಫ್ರೀದಿ

ಲೀಗ್‌ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಒಟ್ಟು 10 ದಿನಗಳ ಕಾಲ ಟೂರ್ನಿ ನಡೆಯಲಿದೆ. ಕಳೆದ ವರ್ಷವೂ ಟೂರ್ನಿ ನಡೆದಿತ್ತು, ಆದರೆ ಐಸಿಸಿಯಿಂದ ಮಾನ್ಯತೆ ಹೊಂದಿರಲಿಲ್ಲ.