Asianet Suvarna News Asianet Suvarna News

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮರಳಲಿದ್ದಾರೆ ನಿಷೇಧಿತ ಸ್ಮಿತ್ -ವಾರ್ನರ್ !

ಬಾಲ್ ಟ್ಯಾಂಪರ್‌ನಿಂದಾಗಿ ಕ್ರಿಕೆಟ್‌ನಿಂದ  ದೂರ ಉಳಿದಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೇ ಸೆಪ್ಟೆಂಬರ್ 22 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲಿದ್ದಾರೆ. ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿರುವ ಸ್ಮಿತ್ ಹಾಗೂ ವಾರ್ನರ್, 4 ತಿಂಗಳಲ್ಲಿ ಕಮ್‌ಬ್ಯಾಕ್ ಮಾಡುತ್ತಿರುವುದು ಹೇಗೆ? ಇಲ್ಲಿದೆ

Suspended Steve smith and David warner set to come back
Author
Bengaluru, First Published Aug 14, 2018, 12:53 PM IST

ಸಿಡ್ನಿ(ಆ.14): ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.

ಚೆಂಡು ವಿರೂಪಗೊಳಿಸಿ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್, ಕಳೆದ 4 ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ಕ್ರಿಕೆಟ್ ಆಡಿಲ್ಲ. ಇತ್ತೀಚೆಗಷ್ಟೇ ಕೆನಡಾ ಗ್ಲೋಬಲ್ ಟಿ20 ಟೂರ್ನಿ ಆಡೋ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದರು. ಇದೀಗ ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಸ್ಮಿತ್ ಹಾಗೂ ವಾರ್ನರ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.

ಸೆಪ್ಟೆಂಬರ್ 22 ರಂದು ಆಸ್ಟ್ರೇಲಿಯಾ ದೇಸಿ ಟೂರ್ನಿಯಾದ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಮಿತ್ ಹಾಗೂ ವಾರ್ನರ್ ಭಾಗವಹಿಸಲಿದ್ದಾರೆ. ಸದರ್ಲೆಂಡ್ ಹಾಗೂ ರಾಂಡ್ವಿಕ್ ಪೀಟರ್ಸ್‌ಹ್ಯಾಮ್ ತಂಡದ ಪರ ಕಣಕ್ಕಿಳಿಯಲಿರುವ ಸ್ಮಿತ್ ಹಾಗೂ ವಾರ್ನರ್ ಕೆಲ ಪಂದ್ಯ ಆಡಲಿದ್ದಾರೆ.

ಸೌತ್ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ಗೆ ಒಂದು ವರ್ಷದ ನಿಷೇಧ ಹೇರಿದ್ದರೆ, ಮತ್ತೊರ್ವ ಕ್ರಿಕೆಟಿಗ ಕ್ಯಾಮರಾನ್ ಬೆನ್‌ಕ್ರಾಫ್ಟ್‌ಗೆ 9 ತಿಂಗಳು ನಿಷೇಧ ಹೇರಲಾಗಿದೆ.

Follow Us:
Download App:
  • android
  • ios